ಪಿಕಪ್‌ ಡಿಕ್ಕಿ : ಕಾರು ಚಾಲಕನಿಗೆ ಗಾಯ

ಕಾರ್ಕಳ : ಕಾರು ಮತ್ತು ಪಿಕಪ್‌ ವಾಹನ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಆಸ್ಪತ್ರೆ ದಾಖಲಾದ ಘಟನೆ ಎ. 24ರಂದು ಕಾರ್ಕಳ ಹೆಬ್ರಿ ಮುಖ್ಯರಸ್ತೆಯ ಹಿರ್ಗಾನ ಚಿಕ್ಕಲ್‌ ಬೆಟ್ಟು ಕ್ರಾಸ್‌ನಲ್ಲಿ ಸಂಭವಿಸಿದೆ. ಅಜೆಕಾರಿನಿಂದ ಕಾರ್ಕಳದತ್ತ ಸಾಗುತ್ತಿದ್ದ ಇಕೋ ಕಾರು ಮತ್ತು ಜೋಡುರಸ್ತೆಯಿಂದ ಅಜೆಕಾರು ಕಡೆಗೆ ಸಾಗುತ್ತಿದ್ದ ಕೋಳಿ ಸಾಗಾಟದ ಪಿಕಪ್‌ ವಾಹನದ ನಡುವೆ ಡಿಕ್ಕಿಯಾಗಿದ್ದು ಪರಿಣಾಮವಾಗಿ ಕಾರು ಚಾಲಕ ಎಳ್ಳಾರೆ ನಿವಾಸಿ ಶ್ರೀನಿವಾಸ ಭಟ್ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕಾರ್ಕಳ ಟಿಎಂಎಪೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





























































































































error: Content is protected !!
Scroll to Top