ಕಾರ್ಕಳ : ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರನ್ನು ಪೊಲೀಸರು ತಡೆದು ಪ್ರಕರಣ ದಾಖಲಿಸಿಕೊಂಡ ಘಟನೆ ಎ. 21ರಂದು ಮುಂಡ್ಕೂರು ಗ್ರಾಮ ಜಾರಿಗೆಕಟ್ಟೆ ಎಂಬಲ್ಲಿ ನಡೆದಿದೆ. ಜಾರಿಗೆಕಟ್ಟೆಯ ಬಳಿಯ ಚೆಕ್‌ಪೋಸ್ಟ್‌ನಲ್ಲಿ KA-21-C-8373 ನಂಬರ್‌ನ ಟಿಪ್ಪರ್ ಮರಳು ಸಾಗಿಸುತ್ತಿದ್ದ ವೇಳೆ ಟಿಪ್ಪರ್ ನಿಲ್ಲಿಸುವಂತೆ ಸೂಚನೆ ನೀಡಿದರೂ, ಚಾಲಕನು ಟಿಪ್ಪರನ್ನು ನಿಲ್ಲಿಸದೆ ಮುಂದುವರಿದಿದ್ದಾನೆ. ತಕ್ಷಣವೇ ಪೊಲೀಸರು ಬೈಕ್‌ನಲ್ಲಿ ಟಿಪ್ಪರ್ ಹಿಂಬಾಲಿಸಿಕೊಂಡು ಹೋಗಿದ್ದು ಪಡಿತ್ತಾರ್ ಬಳಿ ಟಿಪ್ಪರ್ ಚಾಲಕನು ಟಿಪ್ಪರ್ ನಿಲ್ಲಿಸಿ ಅದರಿಂದ ಇಳಿದು ಪರಾರಿಯಾಗಿರುತ್ತಾನೆ. ಈ ವೇಳೆ ಟಿಪ್ಪರಿನಲ್ಲಿ 6,000 ರೂ. ಮೌಲ್ಯದ ಸುಮಾರು 2 ಯುನಿಟ್ ಮರಳು ಕಂಡುಬಂದಿದೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರಾದ ಸೋಮಪ್ಪ ಬಿಡಿ ಹಾಗೂ ವಿರೂಪಾಕ್ಷಿ ಕಾರ್ಯಾಚರಣೆ ನಡೆಸಿರುತ್ತಾರೆ.
ಕುಕ್ಕುಂದೂರು ಸರ್ವಜ್ಞ ವೃತ್ತ ಬಳಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಎ. 21ರಂದು ನಡೆದಿದೆ. ಲಾರಿ ಚಾಲಕ ನಾಗರಾಜ್, ಮಾಲಕ ಪ್ರವೀಣ್ ಹಾಗೂ ಮೂಡುಬಿದಿರೆ ತಾಲೂಕು ಬೆಳುವಾಯಿ ಗುಡ್ಡೆಯಂಗಡಿ ಎಂಬಲ್ಲಿ ಬಶೀರ್ ಎಂಬವರೊಂದಿಗೆ ಸೇರಿಕೊಂಡು ಸರಕಾರಿ ಸ್ಥಳದಿಂದ ಕೆಂಪು ಕಲ್ಲು ಕಳವು ಮಾಡಿ 300 ಕೆಂಪು ಕಲ್ಲುಗಳನ್ನು ಪರವಾನಿಗೆ ಇಲ್ಲದೇ ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಮರಳು – ಕಲ್ಲು ಸಾಗಾಟದ ಲಾರಿಗಳನ್ನು ತಡೆದು ಪ್ರಕರಣ ದಾಖಲಿಸಿದ ಪೊಲೀಸರು






























































