ಪರ್ಪಲೆ ಕ್ಷೇತ್ರ ಭಕ್ತಿಯ ಕ್ಷೇತ್ರವಾಗಿ ಬೆಳಗಲಿದೆ – ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಕಾರ್ಕಳ : ಪರ್ಪಲೆ ಕ್ಷೇತ್ರ ಭಕ್ತ ಜನರ ಭಕ್ತಿಯ ಕ್ಷೇತ್ರವಾಗಿ ಬೆಳಗಲಿ ಎಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಎ. 20ರಂದು ಅತ್ತೂರು ಪರ್ಪಲೆ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಸ್ಥಾನದ ಪುನರ್ ಪ್ರತಿಷ್ಠೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಬಳಿಕ ಆಶೀರ್ವಚನ ನೀಡಿದರು.
ಒಂದು ಕಡೆ ಗೌರಿ ಶಂಕರ ದೇವಸ್ಥಾನ ಹಾಗೂ ಇನ್ನೊಂದೆಡೆ ದೈವಸ್ಥಾನ ನಿರ್ಮಾಣ ಮಾಡುವ ಮಹತ್ತರವಾದ ಉದ್ದೇಶ ಇಟ್ಟುಕೊಂಡು ಇಲ್ಲಿನ ಸಮಿತಿ ಬಹಳಷ್ಟು ಶ್ರಮಿಸುತ್ತಿದೆ. ಅದ್ಭುತ ಶಿಲ್ಪ ಕಲೆ, ವಾಸ್ತು ವಿನ್ಯಾಸದ ಮೂಲಕ ಇಲ್ಲಿನ ದೈವಸ್ಥಾನ ಸುಂದರವಾಗಿ ರೂಪುಗೊಳ್ಳುತ್ತಿದೆ ಎಂದರು.

ಪರ್ಪಲೆ ಗಿರಿ ಪುನರುತ್ಥಾನ ಸಮಿತಿ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಮಾತನಾಡಿ, ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಆಗಬೇಕಿದೆ. ಮೇ 19ರಂದು ಇಲ್ಲಿ ಜರುಗುವ ದೈವಸ್ಥಾನದ ಪುನರ್ ಪ್ರತಿಷ್ಠೆ ಕಾರ್ಯದಲ್ಲಿ ಸರ್ವರೂ ಭಾಗಿಗಳಾಗಬೇಕೆಂದರು. ಅತ್ತೂರು ಪರ್ಪಲೆಗಿರಿ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಸುಭಾಸ್ ಚಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಾಸ್ತು ತಜ್ಞ ಪ್ರಮಲ್ ಕುಮಾರ್, ಟ್ರಸ್ಟ್ ನ ಕಾರ್ಯದರ್ಶಿ ಸತ್ಯೇಂದ್ರ ಭಟ್, ದಿನೇಶ್ ಭಟ್, ರಾಜಾಪುರ ಸಾರಸ್ವತ ಸೊಸೈಟಿ ಅಧ್ಯಕ್ಷ ರವೀಂದ್ರ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬೋಳ ಪ್ರಶಾಂತ್ ಕಾಮತ್‌ ಉಪಸ್ಥಿತರಿದ್ದರು. ಮನೀಶ್ ಕಾಬೆಟ್ಟು ಕಾರ್ಯಕ್ರಮ ನಿರೂಪಿಸಿದರು.



























































































































error: Content is protected !!
Scroll to Top