ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ದಿಲೀಪ್‌ ವರ್ಗಾವಣೆ – ಪ್ರಸನ್ನ ಕುಮಾರ್‌ ನೂತನ ಎಸ್‌ಐ

ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ದಿಲೀಪ್‌ ಅವರು ವರ್ಗಾವಣೆಗೊಂಡಿದ್ದು ನೂತನ ಎಸ್‌ಐ ಆಗಿ ಪ್ರಸನ್ನ ಎಂ.ಎಸ್‌. ಎ. 15ರಂದು ಅಧಿಕಾರ ಸ್ವೀಕರಿಸಿದರು.

ಮೂಲತಃ ಹಾಸನದವರಾದ ದಿಲೀಪ್‌ 2014ರಲ್ಲಿ ಬೆಂಗಳೂರು ರೈಲ್ವೇ ಠಾಣೆ ಎಸ್‌ಐ ಆಗಿ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಪಡುಬಿದ್ರೆ ಠಾಣೆಯಲ್ಲಿ ಕಾರ್ಯನಿರ್ವಹಿಸಿ ಬಳಿಕ 2 ವರ್ಷಗಳ ಕಾಲ ಸುಳ್ಯ ಠಾಣೆಯಲ್ಲಿ ಎಸ್‌ಐ ಆಗಿ ಕರ್ತವ್ಯ ಸಲ್ಲಿಸಿದ್ದರು. 2023 ಜುಲೈನಿಂದ ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದು ಇದೀಗ ವರ್ಗಾವಣೆಗೊಂಡಿದ್ದಾರೆ.

ಪ್ರಸನ್ನ ಎಂ.ಎಸ್. ಅವರು ಮೂಲತಃ ಶಿವಮೊಗ್ಗದವರಾಗಿದ್ದು 2015ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ. 2017ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ಎಸ್‌ಐ ಆಗಿ ಅಧಿಕಾರ ವಹಿಸಿದ್ದು, ಕೋಮುಸೂಕ್ಷ್ಮ ಪ್ರದೇಶವೆಂದು ಗುರುತಿಸಿಕೊಂಡಿದ್ದ ಅಲ್ಲಿ ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದರು. ನೆಟ್ಟಾರು ಪ್ರಕರಣ ಸೇರಿದಂತೆ ಹಲವು ಕೊಲೆ, ಕಳ್ಳತನ ಪ್ರಕರಣ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಸನ್ನ ಅವರು ಎನ್‌ಐಎ ತಂಡದಲ್ಲೂ ಸಕ್ರಿಯವಾಗಿದ್ದರು. 2022 ಜನವರಿಯಲ್ಲಿ ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಆಗಿ ಅಧಿಕಾರ ವಹಿಸಿದ್ದರು. 2023ರಲ್ಲಿ ಕಾರ್ಕಳದಿಂದ ವರ್ಗಾವಣೆಗೊಂಡಿದ್ದು, ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದರು.





































error: Content is protected !!
Scroll to Top