ಬೇಸಿಗೆಯ ಜೊತೆ ಬೆವರು, ಅತ್ಯಧಿಕ ಬೆದರಿನಿಂದ ತೇವಾಂಶ ಹೆಚ್ಚಿ ತ್ವಚೆಯ ಇನ್ಫೆಕ್ಷನ್‌ಗಳು ಸಾಮಾನ್ಯ. ಅದರಲ್ಲೂ ಫಂಗಲ್ ಇನ್ಫೆಕ್ಷನ್ ಬೇಸಿಗೆಯಲ್ಲಿ ಜಾಸ್ತಿ. ಇದನ್ನು ಹೇಗೆ ತಡೆಯಬಹುದು ಎಂದು ತಿಳಿದುಕೊಳ್ಳೋಣ.
ಫಂಗಲ್ ಇನ್ಫೆಕ್ಷನ್‌ಗಳಲ್ಲಿ ರಿಂಗ್ ವರ್ಮ್ ಇನ್ಫೆಕ್ಷನ್ ಆಗುವುದು ಜಾಸ್ತಿ. ಇದು ಚರ್ಮದ ಮೇಲೆ ವರ್ತುಲಕಾರವಿದ್ದು ಸುತ್ತಲು ಉಬ್ಬಿದಂತಿರುತ್ತದೆ. ತುರಿಕೆ ಜಾಸ್ತಿ ಹಾಗಂತ ತುರಿಸಿದರೆ ಉಲ್ಬಣಗೊಳ್ಳುತ್ತದೆ. ಇದು ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. ಇನ್ಫೆಕ್ಷನ್‌ನಿಂದ ಬಳಲುತ್ತಿರುವ ವ್ಯಕ್ತಿಯ ಬಟ್ಟೆ ಇನ್ನೊಬ್ಬರು ಬಳಸುವುದರಿಂದ ಹರಡುತ್ತದೆ .
ಇದನ್ನು ತಡೆಯುವುದು ಹೇಗೆ
ಇನ್ನೊಬ್ಬರ ಬಟ್ಟೆಯನ್ನು ಧರಿಸಬೇಡಿ.
ಅಧಿಕ ಸಮಯದವರೆಗೆ ಚರ್ಮ ಒದ್ದೆಯಾಗದಂತೆ ನೋಡಿಕೊಳ್ಳಿ.
ಪ್ರತಿನಿತ್ಯ ಎರಡು ಹೊತ್ತು ಸ್ನಾನ ಮಾಡಿ ಸರಿಯಾಗಿ ಬಟ್ಟೆಯಿಂದ ಒರಸಿಕೊಳ್ಳಿ. ತೇವಾಂಶ ಉಳಿದರೆ ಇನ್ಫೆಕ್ಷನ್ ಆಗುವುದು ಜಾಸ್ತಿ.
ಅತಿಯಾದ ಉಪ್ಪು, ಖಾರ, ಹುಳಿ ಪದಾರ್ಥವನ್ನು ಸೇವಿಸಸಿರಿ. ಬದನೆಕಾಯಿ, ಉದ್ದಿನ ಪದಾರ್ಥ ಕಡಿಮೆ ಸೇವಿಸಿ.
ಮನೆ ಮದ್ದು
ಇನ್ಫೆಕ್ಷನ್ ಇರುವ ಜಾಗವನ್ನು ಸರಿಯಾಗಿ ತೊಳೆದು ಬಟ್ಟೆಯಿಂದ ಸರಿಯಾಗಿ ಒಣಗಿಸಿ ಕಹಿಬೇವಿನ ಎಣ್ಣೆ ಅಥವಾ ಕಹಿಬೇವಿನ ಎಲೆಯ ರಸವನ್ನು ಹಚ್ಚಿ.
ತುಳಸಿ ರಸದ ಜೊತೆ ಅರಿಶಿಣ ಪುಡಿಯನ್ನು ಬೆರೆಸಿ ಹಚ್ಚಿಕೊಳ್ಳಿ ಒಂದು ಗಂಟೆ ಹಾಗೆ ಬಿಟ್ಟು ನಂತರ ಸ್ನಾನ ಮಾಡಿ.
ಅಮೃತ ಬಳ್ಳಿಯ ಕಷಾಯ ಸೇವಿಸುವುದು ಉತ್ತಮ. ಅಮೃತ ಬಳ್ಳಿಯ ಕಾಂಡಗಳನ್ನು ಚಿಕ್ಕ ಚಿಕ್ಕ ತುಂಡು ಮಾಡಿ ಒಂದು ಗ್ಲಾಸ್ ನೀರಿಗೆ ನಾಲ್ಕೈದು ತುಂಡನ್ನು ಹಾಕಿ ಕುದಿಸಿ ಅರ್ಥ ಗ್ಲಾಸ್ ಬರುವವರೆಗೆ ಕುದಿಸಿ ನಂತರ ಸೋಸಿ ಕುಡಿಯಿರಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ .
ಅಶ್ವಗಂಧ ಚೂರ್ಣವನ್ನು ನೀರಿನಲ್ಲಿ ಬೆಳೆಸಿ ಹಚ್ಚಿ.
ತೆಂಗಿನ ಎಣ್ಣೆಯಲ್ಲಿ ಅರಿಶಿನ ಚೂರ್ಣವನ್ನು ಬೆರೆಸಿ ಹಚ್ಚಿ.
ಮಂಜಿಷ್ಟ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಹಚ್ಚಬಹುದು.
ಕದೀರಚೂರ್ಣವನ್ನು ಅಥವಾ ತ್ರಿಫಲಾ ಚುರ್ಣ ನೀರಿನಲ್ಲಿ ಬೆರೆಸಿ ಹಚ್ಚಬಹುದು.
ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ.
ಬಟ್ಟೆಯನ್ನು ದಿನಾಲು ಎರಡು ಸಲ ಬದಲಿಸಿ
ಸ್ನಾನದ ನೀರಿನಲ್ಲಿ ಬೇವಿನ ಎಲೆ ಅಥವಾ ಬೇವಿನ ಎಣ್ಣೆಯನ್ನು ಸ್ವಲ್ಪ ಹಾಕಿ ಸ್ನಾನ ಮಾಡಿ.
ಅಧಿಕ ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಸಂಪರ್ಕಕಿಸಿ.






