ಯಕ್ಷ ಮಿತ್ರರು ದುಬಾಯಿ – 22ನೇ ವರ್ಷದ ಯಕ್ಷ ಸಂಭ್ರಮ

ಕಾರ್ಕಳ : ಯಕ್ಷ ಮಿತ್ರರು ದುಬಾಯಿ ಇದರ 22ನೇ ವರ್ಷದ ಯಕ್ಷ ಸಂಭ್ರಮ – 2025 ಕಾರ್ಯಕ್ರಮ ಸೆ. 14ರಂದು ನಡೆಯಲಿದೆ. ಕಾರ್ಯಕ್ರಮದಂದು ಪ್ರದರ್ಶನಗೊಳ್ಳಲಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪ ಎಂಬ ಭಕ್ತಿ ಪ್ರಧಾನ ಯಕ್ಷಗಾನ ಪ್ರಸಂಗದ ಮುಹೂರ್ತ ಪೂಜೆ ಎ. 6ರಂದು ಡಿಐಸಿಯ ವಿ. ಕೆ. ಎಕ್ಸಿಬಿಷನ್ &ಡೆಕೋರ್ ಇಂಡಸ್ಟ್ರಿಯ ಸಭಾಂಗಣದಲ್ಲಿ ನಡೆಯಿತು.

ವಾಸುದೇವ ಭಟ್ ಪುತ್ತಿಗೆ, ಲಕ್ಷ್ಮಿಕಾಂತ್ ಭಟ್ ಮತ್ತು ಸಂತೋಷ್ ರಾವ್ ಅವರ ಪೌರೋಹಿತ್ಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು. ಮೊಗವೀರ್ಸ್ ದುಬೈ ಭಜನ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಯಕ್ಷಗಾನದ ಆಖ್ಯಾನವನ್ನು ವಾಸುದೇವ ಭಟ್ ಪುತ್ತಿಗೆಯವರು ಮತ್ತು ರಾದೇ ಶ್ಯಾಮ್ ಜೀ ಅವರು ಲೋಕಾರ್ಪಣೆಗೊಳಿಸಿದರು.

ಯಕ್ಷ ಗುರು ಕಿಶೋರ್ ಗಟ್ಟಿ ನೇತೃತ್ವದಲ್ಲಿ ಭಾಗವತರಾದ ಕೃಷ್ಣ ಪ್ರಸಾದ್ ರಾವ್, ವೆಂಕಟೇಶ್ ಶಾಸ್ತ್ರಿ, ಮತ್ತು ರಾಜೇಶ್ ಉಚ್ಚಿಲ ಇವರ ಹಿಮ್ಮೇಳ ಸಹಕಾರದೊಂದಿಗೆ ದೇವೆಂದ್ರನ ಒಡ್ಡೊಲಗದ ಮೂಲಕ ಯಕ್ಷಗಾನ ಪ್ರಸಂಗದ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು. ಯು. ಎ. ಇ ಯ ತುಳು ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಯಕ್ಷ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ರಿತೇಶ್ ಅಂಚನ್ ಕುಲಶೇಖರ ಅವರು ಕಾರ್ಯಕ್ರಮ ನಿರೂಪಿಸಿದರು.







error: Content is protected !!
Scroll to Top