ಎ. 12-17 : ಹೆರ್ಮುಂಡೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮನ್ಮಹಾರಥೋತ್ಸವ ಮತ್ತು ನೇಮೋತ್ಸವ

ಕಾರ್ಕಳ : ಹೆರ್ಮುಂಡೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಮತ್ತು ಧರ್ಮರಸು, ಕೊಡಮಣಿತ್ತಾಯ, ಕಲ್ಕುಡ, ಕುಕ್ಕಿನಂತಾಯ, ರಕ್ತೇಶ್ವರಿ, ಬ್ರಹ್ಮ ಬೈದರ್ಕಳ, ಮಾಯಿಂದಾಲೆ ದೇವಿ ನೇಮೋತ್ಸವವು ಎ. 12 ರಿಂದ 17 ರವರೆಗೆ ಜರುಗಲಿದೆ. ಕೊರಂಗ್ರಪಾಡಿ ವೇದಮೂರ್ತಿ ವಿದ್ವಾನ್‌ ಶ್ರೀನಿವಾಸ್‌ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.

ಎ. 11 ರಂದು ಸಂಜೆ ಹೊರೆಕಾಣಿಕೆ ಹಸಿರುವಾಣಿ ಮೆರವಣಿಗೆಯೊಂದಿಗೆ ಉಗ್ರಾಣ ಮಹೂರ್ತ, ಸಂಜೆ 7 ಗಂಟೆಗೆ ಅಂಕುರಾರ್ಪಣೆ ನಡೆಯಲಿದೆ.
ಎ. 12ರಂದು ಬೆಳಿಗ್ಗೆ ಧ್ವಜಾರೋಹಣ, ಅಗ್ನಿಜನನ, ನವಕ ಪ್ರಧಾನ, ಮಧ್ಯಾಹ್ನ ಗಂ. 12-30ಕ್ಕೆ ಮಹಾಪೂಜೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7-30ಕ್ಕೆ ಆರಾಧನಾ ಪೂಜೆ, ರಾತ್ರಿ ಉತ್ಸವ ಬಲಿ, ರಥಸುತ್ತು ಸೇವೆ, 7-30ರಿಂದ 8-30ರವರೆಗೆ ಹೆರ್ಮುಂಡೆ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ.

ಎ. 13ರಂದು ಬೆಳಿಗ್ಗೆ ನವಕ ಪ್ರಧಾನ, ಶ್ರೀ ದುರ್ಗಾಹೋಮ ಮಧ್ಯಾಹ್ನ ಗಂ. 12-30ಕ್ಕೆ ಮಹಾಪೂಜೆಯಾಗಿ ಸಂತರ್ಪಣೆ. ಸಂಜೆ 7-30ಕ್ಕೆ ಆರಾಧನಾ ಪೂಜೆ, ರಾತ್ರಿ 9 ಗಂಟೆಗೆ ಉತ್ಸವ ಬಲಿ, ರಥಸುತ್ತು ಸೇವೆ, ರಾತ್ರಿ 12-00ಕ್ಕೆ ರಂಗಪೂಜಾ ಮಹೋತ್ಸವ ಜರುಗಲಿದೆ.

ನಾಟಕ
ರಾತ್ರಿ 9.30 ಗಂಟೆಗೆ ಡೆನ್ನಾನ ಕಲಾವಿದೆರ್‌ ಕಾರ್ಕಳ ಇವರಿಂದ ಹಾಸ್ಯಮಯ ನಾಟಕ ಬ್ಯಾಂಡ್‌ ವಾದ್ಯ ಪ್ರದರ್ಶನಗೊಳ್ಳಲಿದೆ.

ಎ. 14ರಂದು ಬೆಳಿಗ್ಗೆ 11 ಗಂಟೆಗೆ ಬ್ರಹ್ಮಬೈದರ್ಕಳ ಗರಡಿಯಲ್ಲಿ ನವಕಪ್ರಧಾನ, ಮಧ್ಯಾಹ್ನ 12-00ಕ್ಕೆ ಮಹಾಪೂಜೆಯಾಗಿ ಸಂತರ್ಪಣೆ, ಸಂಜೆ 7-30ಕ್ಕೆ ಆರಾಧನಾ ಪೂಜೆ, ರಾತ್ರಿ 9ಕ್ಕೆ ಉತ್ಸವ ಬಲಿ, ರಥಸುತ್ತು ಸೇವೆ, ಸವಾರಿ ಬಲಿ, ಕಟ್ಟೆಪೂಜೆ ನಡೆಯಲಿದೆ.

ರಥೋತ್ಸವ
ಎ. 15 ರಂದು ನವಕಪ್ರಧಾನ, ಮಧ್ಯಾಹ್ನ 11-05ಕ್ಕೆ ಮಹಾಪೂಜೆ, ರಥಸಂಪ್ರಕ್ಷಣೆ, 12 ಗಂಟೆಗೆ ರಥಾರೋಹಣವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಆರಾಧನಾ ಪೂಜೆ, ರಾತ್ರಿ 8 ಗಂಟೆಗೆ ಮಹಾರಥೋತ್ಸವ, ಶ್ರೀ ಭೂತ ಬಲಿ, ಕವಾಟ ಬಂಧನ ನಡೆಯಲಿದೆ.

ತುಲಾಭಾರ ಸೇವೆ – ನೇಮೋತ್ಸವ
ಎ. 16ರಂದು ಬೆಳಿಗ್ಗೆ ಕವಾಟೋದ್ಘಾಟನೆ, ದಶವಿಧಸ್ನಾನ ಪ್ರಸನ್ನ ಪೂಜೆ, 10 ಗಂಟೆಗೆ ತುಲಾಭಾರ ಸೇವೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆಯಾಗಿ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5-30ಕ್ಕೆ ದೈವಗಳ ಭಂಡಾರ ಹೊರಡುವುದು ರಾತ್ರಿ 9 ಗಂಟೆಗೆ ಆರಾಧನಾ ಪೂಜೆ, ಅನ್ನ ಸಂತರ್ಪಣೆ, 9-30ರಿಂದ ಶ್ರೀ ಧರ್ಮರಸು, ಕೊಡಮಂತ್ತಾಯ, ಕಲ್ಕುಡ, ಕುಕ್ಕಿನಂತಾಯ, ರಕೇಶ್ವರಿ, ಬ್ರಹ್ಮ ಬೈದರ್ಕಳ ದೈವಗಳ ಕೋಲ, ರಾತ್ರಿ 2 ಗಂಟೆಯಿಂದ ಶ್ರೀ ದೇವರ ಅವಭೃತ, ವಸಂತ ಕಟ್ಟೆ ಪೂಜೆ, ಧ್ವಜಾವರೋಹಣ ನಡೆಯಲಿದೆ.
ಎ. 17ರಂದು ಪಂಚವಿಂಶತಿ ಕಲಶಾಭಿಷೇಕ, ಮಹಾ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಬೆಳಿಗ್ಗೆ 8.30ಕ್ಕೆ ಮಾಯಿಂದಾಲೆ ಕೋಲ, ಮಧ್ಯಾಹ್ನ 12ಕ್ಕೆ ಮಹಾಪೂಜೆಯಾಗಿ ಅನ್ನ ಸಂತರ್ಪಣೆ ನಡೆಯಲಿದೆ.









error: Content is protected !!
Scroll to Top