ಮಿಯ್ಯಾರು : ನಾಲ್ಕು ದನ ಕಳವು – ದೂರು ದಾಖಲು

ಕಾರ್ಕಳ : ಮಿಯ್ಯಾರು ಗ್ರಾಮದ ಸುಲೋಚನಾ ಎಂಬವರ ಮನೆಯಲ್ಲಿ ಫೆ. 23ರಂದು ಸಂಜೆ ಎಂದಿನಂತೆ ಮನೆಯ ದನಗಳನ್ನು ಕಂಪೌಂಡಿನೊಳಗೆ ಕೂಡಿ ಹಾಕಿದ್ದರು. ಫೆ. 23ರಂದು ಮುಂಜಾನೆ ಯಾರೋ ಕಳ್ಳರು 3 ತುಸು ಕೆಂಪು ಬಣ್ಣದ ದನಗಳನ್ನು ಮತ್ತು 1 ಕಪ್ಪು ಮಿಶ್ರಿತ ಕೆಂಪು ಬಣ್ಣದ ದನವನ್ನು ಬಿಳಿ ಬಣ್ಣದ ಕಾರಿನಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಸುಲೋಚನಾ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top