ಕಾರ್ಕಳ : ವಿಶಾಲ್‌ ಬಸ್‌ ಅಪಘಾತ

ಕಾರ್ಕಳ : ಮಂಗಳೂರಿನಿಂದ ಕಾರ್ಕಳಕ್ಕೆ ಬರುತ್ತಿದ್ದ ವಿಶಾಲ್‌ ಬಸ್‌ಗೆ ಮುಂಬಯಿ ಸಾಗುವ ಬಸ್‌ ಡಿಕ್ಕಿಯಾದ ಘಟನೆ ಫೆ. 28ರಂದು ಕಾರ್ಕಳದಿಂದ ಪಡುಬಿದಿರೆ ಹೆದ್ದಾರಿ ಸಂಪರ್ಕಿಸುವ ಪರ್ಪಲೆ ಕುಂಟಲ್ಪಾಡಿಯಲ್ಲಿ ಸಂಭವಿಸಿದೆ. ಕಾರ್ಕಳ ರಸ್ತೆಯಿಂದ ಪಡುಬಿದ್ರೆಯತ್ತ ಸಾಗುತ್ತಿದ್ದ ಮುಂಬಯಿಗೆ ಹೋಗುವ ಆನಂದ್‌ ಬಸ್‌ ಮುಂಭಾಗದಲ್ಲಿ ಮಂಗಳೂರಿನಿಂದ ಬರುತ್ತಿದ್ದ ವಿಶಾಲ್‌ ಬಸ್‌ನ ಬಲಬದಿಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಹಿಂಭಾಗದ ಸೀಟಿನಲ್ಲಿದ್ದ ಐದು ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದಿಂದಾಗಿ ಬಸ್‌ನ ಹಿಂಭಾಗ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್‌ನಲ್ಲಿ ಸಾಗಿಸಲಾಗಿದೆ.

























































































































error: Content is protected !!
Scroll to Top