ಕಾರ್ಕಳ : ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆ ನೇಣಿಗೆ ಶರಣಾದ ಘಟನೆ ಮಿಯ್ಯಾರು ಗ್ರಾಮದಲ್ಲಿ ಸಂಭವಿಸಿದೆ. ಮಿಯ್ಯಾರಿನ ಭೋಜ ಎಂಬುವರ ಪತ್ನಿ ಗೀತಾ (53ವ.) ಎಂಬುವರೆ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಫೆ. 26ರಂದು ಮಧ್ಯಾಹ್ನ ತನ್ನ ಮನೆಯ ಹಿಂಭಾಗ ಇರುವ ಕೊಟ್ಟೆಗೆಯ ಪಕ್ಕಾಸಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆ ನೇಣಿಗೆ ಶರಣು


































