ಕಾರ್ಕಳ : ಕಲ್ಯಾ ಗ್ರಾಮದ ಕುಂಟಾಡಿ ಎಂಬಲ್ಲಿ ಕಾಪುವಿನ ಮಹೇಶ ಎಂಬುವರು ಅಡಿಕೆ ಮತ್ತು ರಬ್ಬರ್ ತೋಟದ ಕೃಷಿ ಮಾಡಿಕೊಂಡಿದ್ದು, ಕೆಲಸದ ಬಗ್ಗೆ ಎಂಟು ತಿಂಗಳಿನಿಂದ ಕೇರಳದ ಜೈಮೊಹನ್ ಮತ್ತು ಆತನ ಹೆಂಡತಿ ಜಾಜಿ ಮೊಳ್ ಎಂಬವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಫೆ. 25ರಂದು ರಬ್ಬರ್ ತೋಟದಿಂದ ಬೆಳೆದ ರಬ್ಬರ್ ಶೀಟನ್ನು ತೋಟದಲ್ಲಿನ ಗೋಡಾನಿನಲ್ಲಿ ಸಂಗ್ರಹಿಸಿಟ್ಟಿದ್ದು, ಸಂಜೆ 5.00ಗಂಟೆಗೆ ಕರೆ ಮಾಡಿ ಜೈಮೋಹನ್ ಬಳಿ ಮಾತನಾಡಿದ್ದು, ಫೆ. 26ರಂದು ಮುಂಜಾನೆ 6.30ರ ವೇಳೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುವ ಬಗ್ಗೆ ಅನುಮಾನಗೊಂಡು ಕಾಪುವಿನಿಂದ ಕುಂಟಾಡಿಯ ತೋಟದ ಬಳಿ ಬಂದು ನೋಡಿದಾಗ, ಗೋಡಾನಿನ ಬಾಗಿಲು ಬೀಗ ಮುರಿದು ರಬ್ಬರ್ ಶಿಟ್, ಹುಲ್ಲುಕಟ್ಟಿಂಗ್ ಮಾಡುವ ಯಂತ್ರ ಹಾಗೂ ಸ್ಪ್ರೇ ಮಿಷನ್ ಕಳುವಾಗಿದ್ದು ಈ ಸ್ವತ್ತುಗಳನ್ನು ಕೆಲಸಕ್ಕಿದ್ದ ಜೈಮೊಹನ್ ಮತ್ತು ಜಾಜಿ ಮೊಳ್ ಎಂಬವರು ಕಳವು ಮಾಡಿಕೊಂಡು ಹೋಗಿರುವುದಾಗಿ, ಕಳುವಾದ ರಬ್ಬರ್ ಶೀಟಿನ ಅಂದಾಜು ಮೌಲ್ಯ 1,30,000 ಹಾಗೂ ಹುಲ್ಲು ಕಟ್ಟಿಂಗ್ ಮಿಷನಿನ ಮೌಲ್ಯ 10,000, ಸ್ಪ್ರೆ ಮಿಷನಿನ ಮೌಲ್ಯ 2,000 ಆಗಿರುತ್ತದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸ್ವತ್ತು ಕಳವು : ದೂರು ದಾಖಲು


































