ಕಾರ್ಕಳ : ಮೊಹಮ್ಮದ್ ರಫೀಕ್ ಮತ್ತು ರೇಶ್ಮಾ ಬಾನು ಹಿರಿಯಡ್ಕದಿಂದ ಸುಳ್ಳ ತಾಲೂಕಿನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿ ವಾಪಾಸು ಹಿರಿಯಡ್ಕಕ್ಕೆ ಹಿಂತಿರುಗಿ ಮಧ್ಯಾಹ್ನ 2.30ರ ಸಮಯದಲ್ಲಿ ಹೋಗುತ್ತಿರುವಾಗ, ಬೈಲೂರು ಪರಶುರಾಮ ಥೀಂ ಪಾರ್ಕ್ ತಿರುವು ಬಳಿ, ರಸ್ತೆಯ ಬದಿ ಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಬರುತ್ತಿದ್ದ ಲಕ್ಷ್ಮೀನಾರಾಯಣ ಎಂಬವರ ಮೂಗಿನ ಮೂಳೆ ಮತ್ತು ಎಡಕಾಲಿನ ಮೂಳೆ ಮುರಿತ ಉಂಟಾಗಿ, ಸಹ ಪ್ರಯಾಣಿಕರಾದ ರೇಶ್ಮಾ ಬಾನುರವರಿಗೆ ಬಲಕಾಲಿಗೆ ಗಂಭಿರ ಸ್ವರೂಪದ ಗಾಯವಾಗಿದ್ದು, ಕಾರು ಚಾಲಕನಿಗೂ ಗಾಯವಾಗಿದ್ದು, ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ಕಾರು ಢಿಕ್ಕಿ : ಚಾಲಕ ಆಸ್ಪತ್ರೆಗೆ ದಾಖಲು
























