ಮಾ. 9 : ಕಾರ್ಕಳ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ವತಿಯಿಂದ 60 ಗಜಗಳ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ

ಕಾರ್ಕಳ : ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ಇವರ ಆಶ್ರಯದಲ್ಲಿ ಕ್ಷೇಮನಿಧಿ ಮತ್ತು ವಿದ್ಯಾನಿಧಿ ಸಹಾಯಾರ್ಥವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಮಟ್ಟದ ವಿಶ್ವಕರ್ಮ ಸಮಾಜ ಬಾಂಧವರಿಗಾಗಿ 60 ಗಜಗಳ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ ಮಾ. 9ರಂದು ಬೆಳಿಗ್ಗೆ 8ರಿಂದ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದೆ.

ಪ್ರಥಮ ಬಹುಮಾನ ರೂ. 25,000/- ಹಾಗೂ ಶಾಶ್ವತ ಫಲಕ ದ್ವಿತೀಯ ಬಹುಮಾನ ರೂ. 15,000/- ಹಾಗೂ ಶಾಶ್ವತ ಫಲಕ ನೀಡಲಾಗುವುದು. ಒಂದು ತಂಡಕ್ಕೆ ಪ್ರವೇಶ ಶುಲ್ಕ 2500 ಆಗಿದ್ದು, ಈ ಪಂದ್ಯವು ಸೀಮಿತ ಓವರ್‌ಗಳಾಗಿರುತ್ತದೆ. ಪ್ರತಿ ಆಟಗಾರನ ಆಧಾರ್‌ಕಾರ್ಡ್ ಕಡ್ಡಾಯವಾಗಿದೆ. ಪಂದ್ಯಾಟ ಟೈ ಆದಲ್ಲಿ ವಿಕೆಟ್ ಆಧಾರದಲ್ಲಿ ವಿಜಯಿ ತಂಡವನ್ನು ಘೋಷಿಸಲಾಗುತ್ತದೆ. ರಾಡಿ ಎಸೆತಕ್ಕೆ ಅವಕಾಶವಿಲ್ಲ. ಉಪಾಂತ್ಯ ಪಂದ್ಯದಲ್ಲಿ ನಿರ್ಗಮಿಸಿದ ತಂಡಕ್ಕೆ ನಗದು ಪುರಸ್ಕಾರವಿದೆ.

ಪ್ರವೇಶ ಶುಲ್ಕ ಮುಂಗಡವಾಗಿ ರೂ.1500/- ನ್ನು ಮಾ. 3ರ ಒಳಗೆ ಪಾವತಿಸಿ, ತಂಡವನ್ನು ನೋಂದಾಯಿಸುವುದು. ತಂಡಗಳು ನಿಗದಿತ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಕಡ್ಡಾಯವಾಗಿ ಹಾಜರಿರಬೇಕು. ಪಂದ್ಯಾವಳಿಯ ಯಾವುದೇ ನಿಯಮ ಬದಲಾವಣೆ ಸಂಘಟಕರ ತೀರ್ಮಾನವಾಗಿರುತ್ತದೆ. ತೀರ್ಪುಗಾರರ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ. ನಿಯಮ ಮೀರಿದ ತಂಡವನ್ನು ಅಮಾನತುಗೊಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ಅಶೋಕ್ ಆಚಾರ್ಯ ಅಂಡಾರು : 9886664714, ಎಮ್. ರಮೇಶ ಆಚಾರ್ಯ 9844995533, ವಿಶ್ವನಾಥ ಆಚಾರ್ಯ : 9964071581ಇವರನ್ನು ಸಂಪರ್ಕಿಸಬಹುದಾಗಿದೆ.







































































error: Content is protected !!
Scroll to Top