ಜಾನುವಾರು ಅಕ್ರಮ ಸಾಗಾಟ – ಆರೋಪಿ ಪೊಲೀಸ್ ವಶಕ್ಕೆ

ಕಾರ್ಕಳ : ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದ ವಾಹನ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಫೆ. 11ರಂದು ನಲ್ಲೂರಿನಲ್ಲಿ ಸಂಭವಿಸಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸ್‌ ಉಪನಿರೀಕ್ಷಕ ದಿಲೀಪ್ ಜಿ. ಆರ್ . ಅವರು ಫೆ. 10ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಫೆ. 11ರ ಮುಂಜಾನೆ 3:45ಕ್ಕೆ ನಲ್ಲೂರು ಗ್ರಾಮದ ನೇಲದಬೆಟ್ಟು ಎಂಬಲ್ಲಿ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ತೆರಳಿದಾಗ ಅಲ್ಲಿ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ (KA21-B-1902) ದಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಹಗ್ಗಗಳಿಂದ ಕಟ್ಟಿ ತುಂಬಿಸಿರುವುದು ಗಮನಕ್ಕೆ ಬಂದಿರುತ್ತದೆ. ಸ್ಥಳದಲ್ಲಿದ್ದ ಆಪಾದಿತ ಉಸ್ಮಾನ್‌ನಲ್ಲಿ ವಿಚಾರಿಸಿದಾಗ, ಈತನು ಉಪ್ಪಿನಂಗಡಿ ಕರಾಯದ ತೌಸೀಫ್ ಮತ್ತು ಫೈಜಲ್ ಎಂಬವರೊಂದಿಗೆ ಸೇರಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ನಲ್ಲೂರಿನ ಸತೀಶ ಎಂಬವರಿಂದ ಖರೀದಿ ಮಾಡಿದ ಜಾನುವಾರುಗಳನ್ನ ಕರಾಯದ ಮುಸ್ತಾಫ ಎಂಬವರ ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಆಪಾದಿತ ಉಸ್ಮಾನ್‌ನನ್ನು, ಅಶೋಕ್‌ ಲೈಲ್ಯಾಂಡ್ ಗೂಡ್ಸ್ ವಾಹನ (KA21-B-1902), ಜಾನುವಾರು 3 ಮತ್ತು ಜಾನುವಾರುಗಳನ್ನು ಕಟ್ಟಿದ 3 ಹಗ್ಗಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





























































































































error: Content is protected !!
Scroll to Top