ಮಾಳ : ಗೂಡ್ಸ್‌ ವಾಹನ ಪಲ್ಟಿ – ಐವರಿಗೆ ಗಾಯ

ಕಾರ್ಕಳ : ಗೂಡ್ಸ್‌ ವಾಹನ ಪಲ್ಟಿಯಾಗಿ ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಾಳದಲ್ಲಿ ಫೆ. 12ರಂದು ಬೆಳಿಗ್ಗೆ ಸಂಭವಿಸಿದೆ. ಕಳಸದಿಂದ ಮಂದಾರ್ತಿಯೆಡೆಗೆ ಸಾಗುತ್ತಿದ್ದ ವಾಹನ ಎಂದು ಹೇಳಲಾಗುತ್ತಿದೆ. ಅಪಘಾಕ್ಕೀಡಾದವರು ಜಾತ್ರೆಯಲ್ಲಿ ವ್ಯಾಪಾರ ನಡೆಸುವವರು ಎನ್ನಲಾಗುತ್ತಿದ್ದು, ಕಳಸದಲ್ಲಿ ವ್ಯಾಪಾರ ಮುಗಿಸಿ ಮಂದಾರ್ತಿಯಡೆಗೆ ಸಾಗುವಾಗ ಮಾಳ ಗೇಟ್‌ ದಾಟಿ ಪೆಟ್ರೋಲ್‌ ಪಂಪ್‌ ಬಳಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮವಾಗಿ ವಾಹನದಲ್ಲಿದ್ದ ಚಾಲಕ ಸೇರಿದಂತೆ ಐವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.





























































































































error: Content is protected !!
Scroll to Top