ಬೈಕ್‌ ಡಿಕ್ಕಿ – ಪಾದಾಚಾರಿ ಆಸ್ಪತ್ರೆ ದಾಖಲು

ಕಾರ್ಕಳ : ಬೈಕ್‌ ಡಿಕ್ಕಿಯಾಗಿ ಪಾದಚಾರಿ ಆಸ್ಪತ್ರೆ ದಾಖಲಾದ ಘಟನೆ ಫೆ. 10ರಂದು ಪುಲ್ಕೇರಿ ಬೈಪಾಸ್‌ನಲ್ಲಿ ನಡೆದಿದೆ. ರಾತ್ರಿ 10.20ರ ವೇಳೆಗೆ ಸುಧಾಕರ (38) ಎಂಬವರು ಪುಲ್ಕೇರಿ ಬೈಪಾನ್‌ಲ್ಲಿರುವ ಹೋಟೇಲ್‌ನಲ್ಲಿ ಕೆಲಸ ಮುಗಿಸಿ, ಪುಲ್ಕೇರಿ ಬೈಪಾಸ್‌ ಕಡೆಯಿಂದ ಅವರ ಮನೆಯಾದ ಕರಿಯಕಲ್ಲು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬೈಪಾಸ್‌ ಕಡೆಯಿಂದ ಬಜಗೋಳಿ ಕಡೆಗೆ ಸಾಗುತ್ತಿದ್ದ ಮೋಟಾರ್‌ ಸೈಕಲ್‌ (KA 20 EW 9090) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸುಧಾಕರ ಅವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೋಟಾರು ಸೈಕಲ್‌ ಸವಾರನೂ ಗಾಯಗೊಂಡಿದ್ದಾನೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top