ಮುನಿಯಾಲು : ಸುದರ್ಶನ ಕ್ರಿಯೆ, ಯೋಗ, ಪ್ರಾಣಾಯಾಮ ಶಿಬಿರ ಸಂಪನ್ನ

ಹೆಬ್ರಿ : ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಆಶ್ರಯದಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಆನಂದ ಉತ್ಸವ ಇದರ ಶಿಕ್ಷಕಿ ಕಾಸರಗೋಡು ಕಲಾ ಅವರ ನೇತೃತ್ವದಲ್ಲಿ, ಆರು ದಿನ ನಡೆದ ಸುದರ್ಶನ ಕ್ರಿಯೆ, ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರವು ಮುನಿಯಾಲು ಮಾರಿಗುಡಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಜ.5ರಂದು ಸಂಪನ್ನಗೊಂಡಿತು.
ದಿ ಆರ್ಟ್ ಆಫ್ ಲಿವಿಂಗ್‌ನ ಕಲಾ ಅವರು ಮಾತನಾಡುತ್ತಾ, ಸಂಸ್ಥೆಯ ಗುರುದೇವ್‌ ರವಿಶಂಕರ್ ಗುರೂಜಿಯವರ ದೂರದೃಷ್ಟಿಯಿಂದ ಇಂತಹ ಶಿಬಿರಗಳು ದೇಶದೆಲ್ಲೆಡೆ ನಡೆಯುತ್ತಿದ್ದು, ಗ್ರಾಮೀಣ ಭಾಗವಾದ ಮುನಿಯಾಲಿನಲ್ಲಿ ಈ ಶಿಬಿರ ನಡೆದಿರುವುದು ಸಂತಸದಾಯಕ. ಆರು ದಿನ ಶಿಬಿರದಲ್ಲಿ ಕಲಿತಂತಹ ಆಸನಗಳನ್ನು ದಿನನಿತ್ಯ ಬೆಳಿಗ್ಗೆ ಅಭ್ಯಸಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
60ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಭಾಗವಹಿಸಿದ್ದರು. ಉದ್ಯಮಿ ಮಂಜುನಾಥ ಸ್ವಾಗತಿಸಿದರು. ವರಂಗ ರಾಮಚಂದ್ರ ಭಟ್ ನಿರೂಪಿಸಿ, ಪ್ರಗತಿಪರ ಕೃಷಿಕ ಮೂರ್ಸಾಲು ಗೋವಿಂದರಾಜ್ ವಂದಿಸಿದರು.





























































































































error: Content is protected !!
Scroll to Top