ಮಣಿಪಾಲ : ವಿದ್ಯಾರ್ಥಿಗಳು ಗುರುವಿನ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು. ಶಿಸ್ತುಬದ್ಧ ಶಿಕ್ಷಣ ಸಾಧನೆಗೆ ಮೂಲಮಂತ್ರವೆಂದು ನಿವೃತ್ತ ಉಪನಿರ್ದೇಶಕ ಆರ್. ಬಿ. ನಾಯಕ್ ಅಭಿಪ್ರಾಯಪಟ್ಟರು.
ಅವರು ಗುರುವಾರ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಸನ್ಮಾನ
ನಿವೃತ್ತ ಶಿಕ್ಷಕರಾದ ವಿವೇಕಾನಂದ ಸರಕಾರಿ ಹಿ.ಪ್ರಾ. ಶಾಲೆಯ ಸದಾನಂದ ಕೆ.ಎಸ್., ಸರಕಾರಿ ಹಿ.ಪ್ರಾ. ಶಾಲೆ ರಾಜೀವ ನಗರದ ಕಲ್ಪನಾ, ಎಂ.ಜೆ.ಸಿಯ ಗುಲಾಬಿ, ಸರಕಾರಿ ಹಿ.ಪ್ರಾ.ಶಾಲೆ ವಳಕಾಡಿನ ಹರಿಣ ಅವರನ್ನು ಅಜೆಕಾರ್ ಪದ್ಮಗೋಪಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಅಮೆಚೂರ್ ಅಥ್ಲೆಟಿಕ್ಸ್‌ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಂಸ್ಥೆಯ ವಿದ್ಯಾರ್ಥಿಗಳಾದ ಚಿರಾಗ್ ಸಿ. ಪೂಜಾರಿ ಹಾಗೂ ಸ್ವಿಮ್ಮಿಂಗ್‍ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನಿಧಿ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮಣಿಪಾಲ ಟ್ರಸ್ಟ್ ಸಂಚಾಲಕ ಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲ ಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.































































