ತುಳುಕೂಟ ಕುವೈಟ್ ಬೆಳಿಹಬ್ಬ – 3 ಲಕ್ಷದ 25 ಸಾವಿರ ರೂ. ವಿದ್ಯಾರ್ಥಿ ವೇತನ ವಿತರಣೆ

ಉಡುಪಿ : ತುಳುಕೂಟ ಕುವೈಟ್ ಬೆಳ್ಳಿಹಬ್ಬದ ಅಂಗವಾಗಿ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸರಕಾರಿ ಕನ್ನಡ ಮಾಧ್ಯಮ ಶಾಲೆಯ 33 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ. ಯಂತೆ 3 ಲಕ್ಷ 25 ಸಾವಿರ ರೂ. ವಿದ್ಯಾರ್ಥಿ ವೇತನವನ್ನು ಆ. 21ರಂದು ವಿತರಿಸಲಾಯಿತು. ತುಳುಕೂಟ ಕುವೈಟ್ ಅಧ್ಯಕ್ಷ ಸಾಲ್ಮೀಯ ಹಾಗೂ ಮೆಡಿಕಲ್ ಕುವೈಟ್ ಇದರ ಜನರಲ್ ಮಾನೇಜರ್ ಅಬ್ದುಲ್ ರಜಾಕ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಈ ಸಂಧರ್ಭ ಚಂದ್ರಹಾಸ ಶೆಟ್ಟಿ, ದಿನೇಶ್ ರಾಮ್, ಹರೀಶ್ ಭಂಡಾರಿ, ಇರ್ಫಾದ್, ವಿಜಯ್ ಕೈರಂಗಳ ಮೊದಲಾದವರು ಉಪಸ್ಥಿತರಿದ್ದರು.





























































































































error: Content is protected !!
Scroll to Top