ಉಡುಪಿ : ಯಕ್ಷರಂಗಾಯಣ ಕಾರ್ಕಳ ಇದರ ನೂತನ ನಿರ್ದೇಶಕರಾಗಿ ಬಿ.ಆರ್. ವೆಂಕಟರಮಣ ಐತಾಳ್ ಅವರು ಆ. 19ರಂದು ಅಧಿಕಾರ ಸ್ವೀಕರಿಸಿದರು. ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಯಕ್ಷರಂಗಾಯಣದ ನಿಕಟಪೂರ್ವ ನಿರ್ದೇಶಕ ಜೀವನ್ ರಾಮ್ ಸುಳ್ಯ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಸದಸ್ಯರಾದ ನಾಗೇಶ್ ಉದ್ಯಾವರ, ಸಂತೋಷ್ ಹಿರಿಯಡ್ಕ, ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯರಾದ ಭರತ್ ಸಿ. ಅಂಚನ್, ಪದ್ಮಪ್ರಸಾದ್ ಜೈನ್, ರಂಗಕರ್ಮಿಗಳಾದ ಸಂದೇಶ್, ಬಾಸುಮ ಕೊಡಗು, ಸುಕುಮಾರ್ ಮುದ್ರಾಡಿ, ಕಾವ್ಯವಾಣಿ, ರಾಜು ಮಣಿಪಾಲ, ಚಂದ್ರನಾಥ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು. ವಸಂತ್ ಎಂ. ಕಾರ್ಯಕ್ರಮ ನಿರ್ವಹಿಸಿದರು.
ಬಿ.ಆರ್. ವೆಂಕಟರಮಣರ ಬಗ್ಗೆ
ಮೂಲತಃ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕ್ರೋಡಬೈಲೂರಿನ ವೆಂಕಟರಮಣರು ಸಾಗರ ತಾಲೂಕು ಭೀಮನಕೋಣೆಯಲ್ಲಿ ನೆಲೆಸಿರುತ್ತಾರೆ. 1989ರಲ್ಲಿ ಹೆಗ್ಗೋಡು ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ರಂಗಶಿಕ್ಷಕರಾಗಿ 2013ರಿಂದ ಪ್ರಾಂಶುಪಾಲರಾಗಿ, 2018ರಲ್ಲಿ ನಿವೃತ್ತಿ ಹೊಂದಿರುತ್ತಾರೆ. ಹತ್ತಾರು ನಾಟಕಗಳನ್ನು ನಿರ್ದೇಶನ ಮಾಡಿರುವ ಇವರು ಅನೇಕ ಗ್ರಂಥ ಸಂಪಾದನೆ ಮಾಡಿರುತ್ತಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಬಿ.ವಿ. ಕಾರಂತ ಫೆಲೋಶಿಪ್ ಮೊದಲಾದ ಪ್ರಶಸ್ತಿಗಳನ್ನು ಅಲಂಕರಿಸಿರುತ್ತಾರೆ.






























































