ಕಾರ್ಕಳ : ಮಿಯ್ಯಾರು ಕಥೋಲಿಕ್ ಸಭಾ ಘಟಕದ ಆಶ್ರಯದಲ್ಲಿ ಮಿಯ್ಯಾರು ಚರ್ಚ್ ಆವರಣದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಾಮಾಜಿಕ ಮುಂದಾಳು, ಕರಿಯಕಲ್ಲು ಹಿಂದೂ ರುದ್ರಭೂಮಿಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ರುದ್ರಭೂಮಿಯ ವ್ಯವಸ್ಥಾಪನ ಸಮಿತಿ ಸಂಚಾಲಕ, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಅವರನ್ನು ಚರ್ಚ್ ನ ಧರ್ಮಗುರು ಯೂನಿಟ್ ಬರ್ಬೋಜಾ ಅವರು ಅಭಿನಂದಿಸಿದರು. ನಿವೃತ್ತ ಸೈನಿಕ ಹವಾಲ್ದಾರ್ ರಾಜೇಶ್ ಶೆಟ್ಟಿಗಾರ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.
ಮಿಯ್ಯಾರು ಕಥೋಲಿಕ್ ಸಭಾ ವತಿಯಿಂದ ಪ್ರಕಾಶ್ ರಾವ್ ಅವರಿಗೆ ಅಭಿನಂದನೆ






























































