ಬಡ ರಿಕ್ಷಾ ಚಾಲಕನ ಮೇಲೆ ಕಾಂಗ್ರೆಸ್ ನವರಿಂದ ಹಲ್ಲೆ ಖಂಡನೀಯ – ಸಂತೋಷ್‌ ರಾವ್‌

ಕಾರ್ಕಳ : ಜೀವನೋಪಾಯಕ್ಕಾಗಿ ರಿಕ್ಷಾ ಚಲಾಯಿಸುತ್ತಿದ್ದ ಕುಕ್ಕುಜೆ ದೊಂಡರಂಗಡಿಯ ನಿತ್ಯಾನಂದ ಕುಲಾಲ್ ಅವರಿಗೆ ವಾಟ್ಸಪ್ ನಲ್ಲಿ ಯಾವುದೋ ಫೋಟೋ- ವಿಡಿಯೋ ಹಾಕಿದ ವಿಚಾರಕ್ಕಾಗಿ ಕಾಂಗ್ರೆಸ್‌ನವರು ಹಲ್ಲೆ ನಡೆಸಿರುವುದು ಖಂಡನೀಯವೆಂದು ಆಟೋ ರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ಕಾರ್ಯಾ‍ಧ್ಯಕ್ಷ ಸಂತೋಷ್‌ ರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕ ತಪ್ಪು ಮಾಡಿದ್ದಲ್ಲಿ ಪೊಲೀಸ್ ಇಲಾಖೆಗೆ ದೂರು ಕೊಡಬಹುದಿತ್ತು. ಅದು ಬಿಟ್ಟು ಕಾಂಗ್ರೆಸ್‌ನವರು ಅಧಿಕಾರವಿದೆ ಎನ್ನುವ ಕಾರಣಕ್ಕಾಗಿ ಬಡ ಆಟೋ ಚಾಲಕನ ಮೇಲೆ ದರ್ಪ, ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ ಎಂದು ಸಂತೋಷ್‌ ರಾವ್‌ ತಿಳಿಸಿದರು.

ಆತಂಕ
ಮುಂದಿನ ದಿನಗಳಲ್ಲಿ ಅಧಿಕಾರದ ಅಮಲಿನಿಂದ ರಿಕ್ಷಾ, ಕಾರು, ಲಾರಿ ಚಲಾಯಿಸಿ ಜೀವನ ಸಾಗಿಸುವವರ ಮೇಲೆ, ಬಡವರ ಮೇಲೆ ಹಲ್ಲೆ ಮಾಡುವಂತಹ ದಿನಗಳು ಕಾರ್ಕಳದಲ್ಲಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ ಸಂತೋಷ್‌ ಅವರು ಕಾರ್ಕಳ ಪೊಲೀಸ್ ಇಲಾಖೆ ಈ ಬಗ್ಗೆ ಕೂಡಲೇ ಎಚ್ಚೆತ್ತು ಹಲ್ಲೆಗೈದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.















































error: Content is protected !!
Scroll to Top