ಕಾರ್ಕಳ : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂ. 6ರಂದು ಸಂಭವಿಸಿದೆ. ವೀಣಾ (62) ಆತ್ಮಹತ್ಯೆಗೆ ಶರಣಾದವರು. ಇವರು 13 ವರ್ಷದ ಹಿಂದೆ ಬಿದ್ದು ತಲೆಗೆ ಗಾಯವಾಗಿ ಆಪರೇಶನ್ ಆಗಿದ್ದು ಅದಾದ ಬಳಿಕ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ವಿಷಯದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಜೂ. 6ರಂದು ಕಸಬಾ ಗ್ರಾಮದ ಅವರ ವಾಸದ ಮನೆಯ ಹತ್ತಿರ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ




































