ದೆಹಲಿ : ಮುಸ್ಲಿಮರ ಪವಿತ್ರ ಹಜ್ ಯಾತ್ರೆ ಜೂನ್ 14 ರಿಂದ ಪ್ರಾರಂಭವಾಗಲಿದೆ ಎಂದು ಸೌದಿ ಅರೇಬಿಯಾ ಘೋಷಣೆ ಮಾಡಿದೆ. ನಂತರ ಕ್ರಮವಾಗಿ ಜೂನ್ 15 ಮತ್ತು ಜೂನ್ 16 ರಂದು ಅರಾಫತ್ ದಿನ ಮತ್ತು ಈದ್ ಅಲ್ ಅಧಾ ಆಚರಣೆಗಳು ನಡೆಯಲಿವೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಮೆಕ್ಕಾವೂ ಒಂದು. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಇಲ್ಲಿಗೆ ಭೇಟಿ ನೀಡಿದರೆ ಪಾಪಗಳು ಕಳೆದು ಹೋಗಲಿವೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಹಜ್ ಯಾತ್ರೆಯು ಪ್ರಪಂಚದಾದ್ಯಂತದ ಮುಸ್ಲಿಮರನ್ನು ಸೌದಿ ಅರೇಬಿಯಾದ ಮೆಕ್ಕಾಕ್ಕೆ ಭೇಟಿ ನೀಡುವಂತೆ ಮಾಡುತ್ತದೆ. ಮೆಕ್ಕಾಕ್ಕೆ ಭೇಟಿ ನೀಡುವ ಮೂಲಕ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಹೆಜ್ಜೆಗಳನ್ನು ಕಾಣಲು ಬಯಸುತ್ತಾರೆ.


































