‘ಹಮಾರೆ ಬಾರಾ’ ಸಿನಿಮಾಕ್ಕೆ ನಿಷೇಧ ವಿಧಿಸಿದ ಕರ್ನಾಟಕ ಸರಕಾರ

ಬೆಂಗಳೂರು : ‘ಹಮಾರೆ ಬಾರಾ’ ಸಿನಿಮಾ ಬಿಡುಗಡೆಗೆ ಕರ್ನಾಟಕ ಸರಕಾರ ನಿಷೇಧ ವಿಧಿಸಿದೆ. ಕಮಲ್ ಚಂದ್ರಾ ನಿರ್ದೇಶನ ಮಾಡಿ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ಸಿನಿಮಾವು ಮುಸ್ಲಿಂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಬಿಡುಗಡೆಗೆ ಈಗಾಗಲೇ ಬಾಂಬೆ ಹೈಕೋರ್ಟ್ ತಡೆ ನೀಡಿದೆ ಅಷ್ಟರಲ್ಲಾಗಲೆ ಕರ್ನಾಟಕ ಸರಕಾರ ಸಿನಿಮಾದ ಬಿಡುಗಡೆ ಮತ್ತು ಸ್ಕ್ರೀಮ್ ಮೇಲೆ ನಿಷೇಧ ಹೇರಿದೆ.

ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆ 1964, ಸೆಕ್ಷನ್ 15 (1) ಮತ್ತು 15(5) ರ ಅನ್ವಯ ಈ ಸಿನಿಮಾದ ಪ್ರದರ್ಶನವನ್ನು ರಾಜ್ಯದಲ್ಲಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಸಿನಿಮಾದ ಪ್ರದರ್ಶನದಿಂದ ರಾಜ್ಯದಲ್ಲಿ ಕೋಮು ಸೌಹಾರ್ಧತೆಗೆ ಧಕ್ಕೆ ಆಗುತ್ತದೆ ಎಂಬ ಕಾರಣ ನೀಡಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಅಲ್ಲದೆ ಕೆಲವು ಅಲ್ಪಸಂಖ್ಯಾತ ಸಂಘಗಳು ಸಿನಿಮಾವನ್ನು ಬಿಡುಗಡೆ ಮಾಡದಿರಲು ಮನವಿ ಮಾಡಿವೆ ಎಂದು ಸಹ ಹೇಳಲಾಗಿದೆ.

ಸಿನಿಮಾದ ಟ್ರೈಲರ್​ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿತ್ತು. ಟ್ರೈಲರ್ ಆಧರಿಸಿ ಅಜರ್ ಎಂಬುವರು ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಸಿನಿಮಾದ ಬಿಡುಗಡೆಗೆ ತಡೆ ನೀಡಿದೆ. ಜೂ. 14 ರವರೆಗೆ ಬಿಡುಗಡೆ ನಿಷೇಧಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಜೂ. 10ಕ್ಕೆ ಮುಂದೂಡಿದೆ. ಸಿನಿಮಾದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಋಣಾತ್ಮಕ ಸಂಭಾಷಣೆಗಳಿವೆ, ಇಸ್ಲಾಂ ಧರ್ಮವನ್ನು ಕೆಟ್ಟ ರೀತಿಯಾಗಿ ಬಿಂಬಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಸಿಬಿಎಫ್​ಸಿ ಈಗಾಗಲೇ ಕೆಲವು ಸಂಭಾಷಣೆಗಳಿಗೆ ಕಟ್​ಗಳನ್ನು ಸೂಚಿಸಿ ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದು, ಬಿಡುಗಡೆಗೆ ತಕಾರರು ಸಲ್ಲಿಸಿಲ್ಲ. ನ್ಯಾಯಾಲಯದಲ್ಲಿಯೂ ಸಹ ಈ ಬಗ್ಗೆ ಸಿಬಿಎಫ್​ಸಿ ಹೇಳಿಕೆ ದಾಖಲಿಸಿದೆ.







































































error: Content is protected !!
Scroll to Top