ಅಪಘಾತವೆಸಗಿದ ಟಿಪ್ಪರ್‌ ಚಾಲಕನ ಮೇಲೆ ಪ್ರಯಾಣಿಕರಿಂದ ಹಲ್ಲೆ

ಕಾರ್ಕಳ : ಟಿಪ್ಪರ್‌ ಮತ್ತು ಮಿನಿ ಬಸ್‌ ಅಪಘಾತವಾದಾಗ ಮಿನಿ ಬಸ್‌ನಲ್ಲಿದ್ದ ಪ್ರಯಾಣಿಕರು ಟಿಪ್ಪರ್‌ ಚಾಲಕ ಮೂಡಿಗೆರೆಯ ಶಿವು ಜಿ.ಎಸ್‌. ಎಂಬವರನ್ನು ವಾಹನದಿಂದ ಎಳೆದುಹಾಕಿ ಹಲ್ಲೆ ಮಾಡಿದ ಘಟನೆ ಮಾಳ ಘಾಟಿಯಲ್ಲಿ ಮೇ 20ರಂದು ಸಂಜೆ ಸಂಭವಿಸಿದೆ. ಸಾರ್ವಜನಿಕರು ಶಿವು ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮಾಳ ಕಡೆಗೆ ಬರುತ್ತಿದ್ದ ಟಿಪ್ಪರ್‌ ಮಾಳ ಘಾಟಿ ಚೆಕ್‌ಪೋಸ್ಟ್‌ ಸಮೀಪ ಘಾಟಿಯಲ್ಲಿ ಶೃಂಗೇರಿಯತ್ತ ಹೋಗುತ್ತಿದ್ದ ಮಿನಿಬಸ್‌ಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ 7-8 ಪ್ರಯಾಣಿಕರು ಶಿವು ಅವರನ್ನು ಎಳೆದು ಹಾಕಿ ಹಲ್ಲೆ ಮಾಡಿದ್ದಾರೆ.
ಮಿನಿ ಬಸ್‌ ಚಾಲಕ ಆರ್‌. ತಿಲಕ್‌ ಎಂಬವರು ಅಪಘಾತದಲ್ಲಿ ತನಗೆ ಗಾಯವಾಗೊರುವ ಕುರಿತು ಶಿವು ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಕರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.





























































































































error: Content is protected !!
Scroll to Top