ದ್ವಿತೀಯ ಪಿಯುಸಿ ಪರೀಕ್ಷೆ -2 : ಕ್ರೈಸ್ಟ್‌ಕಿಂಗ್‌ನ ಪವನ್ ಮತ್ತು ಶ್ರೀದೀಪ ರಾಜ್ಯಕ್ಕೆ ಏಳನೇ ರ‍್ಯಾಂಕ್

ಕಾರ್ಕಳ : ದ್ವಿತೀಯ ಪಿಯುಸಿ ಎರಡನೇ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕ್ರೈಸ್ಟ್‌ಕಿಂಗ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಶ್ರೀದೀಪ ಇಂಗ್ಲೀಷ್ ಹಾಗೂ ವ್ಯವಹಾರ ಅಧ್ಯಯನ ಪರೀಕ್ಷೆ ಬರೆದು ಅವುಗಳಲ್ಲಿ ಕ್ರಮವಾಗಿ 98 ಹಾಗೂ 99 ಅಂಕಗಳೊಂದಿಗೆ ಒಟ್ಟು 592 ಅಂಕ ಗಳಿಸಿದ್ದಾರೆ. ಪವನ್ ಇಂಗ್ಲೀಷ್ ಹಾಗೂ ಅರ್ಥಶಾಸ್ತ್ರಕ್ಕೆ ಪರೀಕ್ಷೆ ಬರೆದಿದ್ದು ಅವುಗಳಲ್ಲಿ ಕ್ರಮವಾಗಿ 94 ಹಾಗೂ 100 ಅಂಕಗಳನ್ನು ಪಡೆದುಕೊಂಡು ಒಟ್ಟು 592 ಅಂಕ ಗಳಿಸಿದ್ದಾರೆ. ಈ ಮೂಲಕ ಈ ಇಬ್ಬರೂ ರಾಜ್ಯಕ್ಕೆ ಏಳನೇ ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜು ಈ ವರ್ಷ ರಾಜ್ಯಮಟ್ಟದಲ್ಲಿ ಹತ್ತು ರ‍್ಯಾಂಕ್‌ಗಳೊಳಗೆ ಒಟ್ಟು 10 ರ‍್ಯಾಂಕ್‌ಗಳನ್ನು ಗಳಿಸಿದಂತಾಗಿದೆ.





























































































































error: Content is protected !!
Scroll to Top