ನೆಕ್ಲಾಜೆ ಕಾಳಿಕಾಂಬಾ ದೇವಿಯ ಗರ್ಭಗುಡಿಗೆ ರಜತ ದ್ವಾರ ಸಮರ್ಪಣೆ

ಕಾರ್ಕಳ : ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮಹೋತ್ಸವದ ಅಂಗವಾಗಿ ಎ. 20ರಂದು ಶ್ರೀ ಕಾಳಿಕಾಂಬಾ ಭಜನಾ ಸೇವಾ ಸಮಿತಿ ವತಿಯಿಂದ ಭಕ್ತಾಧಿಗಳ ಸಹಕಾರದಲ್ಲಿ ಆಲಯದ ಗರ್ಭಗುಡಿಗೆ ರಜತ ದ್ವಾರ ಸಮರ್ಪಿಸಲಾಯಿತು. ಸುಮಾರು 11 ಲಕ್ಷ ರೂ. ವೆಚ್ಚದ ದ್ವಾರವನ್ನು ದೇವಸ್ಥಾನದ ಅಂಗ ಸಂಸ್ಥೆಯಾದ ಭಜನಾ ಸೇವಾ ಸಮಿತಿಯಿಂದ ಅಧ್ಯಕ್ಷ ದಿನೇಶ್‌ ಆಚಾರ್ಯ ಅತ್ತೂರು ಇವರ ನೇತೃತ್ವದಲ್ಲಿ, ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಅಧ್ಯಕ್ಷ ರಮೇಶ್ ಆಚಾರ್ಯ ಮತ್ತು ಸದಸ್ಯರ ನೇತೃತ್ವದಲ್ಲಿ ದೇವಾಲಯದ ಅನ್ನಪೂರ್ಣ ದಾಸೋಹಕ್ಕೆ ಗ್ರೈಂಡರ್‌ ಸಮರ್ಪಿಸಲಾಯಿತು. ಈ ಸಂದರ್ಭ ಭಜನಾ ಸೇವಾ ಸಮಿತಿ ಮತ್ತು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.











































































error: Content is protected !!
Scroll to Top