ಚಿಕ್ಕಮಗಳೂರು : ಉಡುಪಿ – ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆ ಹಣ ನೀಡಿದ ಘಟನೆ ಮಾ. 22ರಂದು ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ 25 ಸಾವಿರ ಹಣ ಇಟ್ಟು ಕೊಟ್ಟಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಅವರು ಇಂದು ನಗರದ ವಿವಿದೆಡೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಚುರುಮುರಿ ಅಂಗಡಿಗೆ ಭೇಟಿ ನೀಡಿದ್ದು ವ್ಯಾಪಾರಿ ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿಗೆ ಚುನಾವಣಾ ಖರ್ಚಿಗೆ ಹಣ ನೀಡಿದ ಚುರುಮುರಿ ವ್ಯಾಪಾರಿ
















































