ಕಾರ್ಕಳ : ಮಾತಿಬೆಟ್ಟು ಸಂಪಿಗೆ ಬಾಕ್ಯಾರು ಶ್ರೀ ಧರ್ಮರಸು, ಕೊಡಮಣಿತ್ತಾಯ, ಕುಕ್ಕಿನಂತಾಯ, ಧೂಮಾವತಿ, ಬಂಟ ಮೈಸಂದಾಯ, ಪಂಜುರ್ಲಿ ಮತ್ತು ಮಹಾಮ್ಮಾಯಿ ಹಾಗೂ ಬ್ರಹ್ಮ ಬೈದರ್ಕಳ, ಮಾಯಾಂದಾಲೆ ಮತ್ತು ಜೋಗಿಪುರುಷ ದೈವಸ್ಥಾನದ ಕಾಲಾವಧಿ ನೇಮೋತ್ಸವ ಮಾ. 24ರಂದು ನಡೆಯಲಿದೆ.
ಮಾ. 22ರಂದು ಬೆಳಗ್ಗೆ 10.15ಕ್ಕೆ ಕಂಬ ಮುಹೂರ್ತ ನಡೆಯಲಿದೆ. ಮಾ. 24ರಂದು ಬೆಳಗ್ಗೆ ತೋರಣ ಮುಹೂರ್ತ, ನವಕ ಪ್ರಧಾನ ಹೋಮ, ಕಲಶಾಭಿಷೇಕ ಮತ್ತು ಮಹಾಪೂಜೆಯಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಮಾತಿಬೆಟ್ಟು ಗುತ್ತಿನಿಂದ ಭಂಡಾರ ಇಳಿಯುವುದು, ರಾತ್ರಿ 8 ಗಂಟೆಗೆ ನೇಮೋತ್ಸವ ನಡೆಯಲಿದೆ.
ಮಾ. 26ರಂದು ರಾತ್ರಿ ಭಜನೆ ಮತ್ತು ಮಾರಿಪೂಜೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ಮಾ. 24 : ಮಾತಿಬೆಟ್ಟು ಸಂಪಿಗೆ ಬಾಕ್ಯಾರು ಧರ್ಮಚಾವಡಿಯಲ್ಲಿ ಧರ್ಮ ದೈವಗಳ ಕಾಲಾವಧಿ ನೇಮೋತ್ಸವ






























































