ಅಧ್ಯಕ್ಷರಾಗಿ ರಾಕೇಶ್ ಶೆಟ್ಟಿ ಕುಕ್ಕುಂದೂರು – ಪ್ರಧಾನ ಕಾರ್ಯದರ್ಶಿಗಳಾಗಿ ರಜತ್ ರಾಮ್ ಮೋಹನ್, ಧನುಷ್ ಆಚಾರ್ಯ ಅತ್ತೂರು
ಕಾರ್ಕಳ : ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಉದ್ಯಮಿ ರಾಕೇಶ್ ಶೆಟ್ಟಿ ಕುಕ್ಕುಂದೂರು ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮುಡಾರು ಗ್ರಾ.ಪಂ. ಸದಸ್ಯ ರಜತ್ ರಾಮ್ ಮೋಹನ್ ಮುಡಾರು ಹಾಗೂ ಅತ್ತೂರಿನ ಧನುಷ್ ಆಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರು ಮಾ. 13ರಂದು ಯುವಮೋರ್ಚಾ ನೂತನ ಪದಾಧಿಕಾರಿಗಳ ಹೆಸರು ಪ್ರಕಟಿಸಿದ್ದಾರೆ.






























































