ವರಂಗ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ – ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಹೆಬ್ರಿ : ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರಂಗದಲ್ಲಿ ಸಂಭವಿಸಿದೆ.
ಪುಟ್ಟು (63) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಳೆದ ಒಂದು ತಿಂಗಳಿನಿಂದ ಜ. 14ರ ಸಂಜೆ 5 ಗಂಟೆಯ ಮಧ್ಯಾವಧಿಯಲ್ಲಿ ವರಂಗ ಗ್ರಾಮದ ಮುನಿಯಾಲು ನೀರಪಲ್ಕೆಯಲ್ಲಿರುವ ಅವರ ಮನೆಯ ಹತ್ತಿರದ ಸರಕಾರಿ ಹಾಡಿಯಲ್ಲಿ ಮರದ ಕೊಂಬೆಗೆ ಸೀರೆಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಜ. 14ರಂದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.







































































error: Content is protected !!
Scroll to Top