ಕಾರ್ಕಳ : ಕಾರ್ಮಿಕನೋರ್ವರು ಕುಸಿದು ಬಿದ್ದು ಸಾವನಪ್ಪಿರುವ ಘಟನೆ ಜ. 14ರಂದು ಸಾಣೂರಿನಲ್ಲಿ ಸಂಭವಿಸಿದೆ.
ನಲ್ಲೂರು ಗ್ರಾಮದ ವಿಶ್ವನಾಥ (43) ಮೃತ ದುರ್ದೈವಿ. ಇವರು ಸಾಣೂರು ಸೌತ್ ಇಂಡಿಯಾ ಕಾರ್ಪೊರೇಷನ್ ಎಂಬ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಭಾನುವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಅವರನ್ನು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ವಿಶ್ವನಾಥ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಾಣೂರು : ಕಾರ್ಮಿಕ ಕುಸಿದು ಬಿದ್ದು ಸಾವು
























