ಮುನಿಯಾಲಿನಲ್ಲಿ ಅಯೋಧ್ಯೆ ಅಕ್ಷತೆ ವಿಶಿಷ್ಟವಾಗಿ ವಿತರಣೆ

ಹೆಬ್ರಿ: ವಿಶ್ವಹಿಂದು ಪರಿಷತ್ ಮಹಿಳಾ ಹಾಗೂ ಪುರುಷರ ತಂಡ ಮುನಿಯಾಲಿನಲ್ಲಿ ವಿಶಿಷ್ಟ ರೀತಿಯಲ್ಲಿ ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ಆಹ್ವಾನ ಪತ್ರಿಕೆ ವಿತರಿಸಿತು.
ಅಯೋಧ್ಯೆಯಲ್ಲಿ ಜ.22ರಂದು ಶ್ರೀ ರಾಮ ಮಂದಿರದ ಪ್ರಾಣಪ್ರತಿಷ್ಠೆ ಬಹಳ ಅದ್ದೂರಿಯಿಂದ ನಡೆಯಲಿದ್ದು, ರಾಷ್ಟ್ರಾದ್ಯಂತ ರಾಮ ಭಕ್ತರು ತಮ್ಮ ಊರಿನಲ್ಲಿ ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದಾರೆ. ಅಂದು ಮುನಿಯಾಲಿನ ಶ್ರೀ ಜಂಗಮೇಶ್ವರ ಮಠದಲ್ಲಿ ಶ್ರೀ ರಾಮನಾಮ ಪಾರಾಯಣ, ಭಜನೆ, ಪೂಜೆ ಹಾಗೂ ಭೂರಿ ಸಮಾರಾಧನೆ ನಡೆಯಲಿದ್ದು, ಆ ಪ್ರಯುಕ್ತ ಊರಿನ ಮನೆಮನೆ ಭೇಟಿ ನೀಡಿ ಆಹ್ವಾನ ಪತ್ರಿಕೆ, ಅಕ್ಷತೆ ನೀಡಿ ಆಹ್ವಾನಿಸಿದರು.
ಮುನಿಯಾಲಿನ ಸುಮಾರು 30 ಮನೆ ಇರುವ ಪ್ರಗತಿ ಅಪಾರ್ಟ್‌ಮೆಂಟ್‌ನಲ್ಲಿ ಅಕ್ಷತೆ ವಿತರಿಸಲು ಹೋದ ತಂಡವನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿ, ಭಜನೆ, ಶ್ರೀ ರಾಮ ದೇವರ ಪೂಜೆ, ಫಲಾಹಾರ ಹಾಗೂ 1992ರಲ್ಲಿ ಕರಸೇವಕನಾಗಿ ಅಯೋಧ್ಯೆಗೆ ತೆರಳಿದ ಹಿರಿಯ ವ್ಯಕ್ತಿ ಪ್ರಭಾಕರ್ ಶೆಟ್ಟಿ ಮುಟ್ಲುಪಾಡಿ ಇವರಿಗೆ ಸನ್ಮಾನಿಸಿದರು.
ಪ್ರಸಾದ್ ಹೆಬ್ಬಾರ್ ಕಬ್ಬಿನಾಲೆ, ಯೋಗೇಂದ್ರ ಜನಪ್ರಿಯ, ರಾಮಚಂದ್ರ ನಾಯಕ್, ಪ್ರಕಾಶ್ ಶೆಟ್ಟಿ ಸಮೃದ್ಧಿ, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಜ್ಯೋತಿ ಹರೀಶ್ ಪೂಜಾರಿ, ರಾಜೇಶ್ ಶೆಟ್ಟಿ, ವಿರಾಜ್ ಇಂಡಸ್ಟ್ರೀಸ್ ಮಾಲಕ ವಿದ್ಯಾಧರ್ ಪೈ, ಯೋಗೀಶ್ ಪೈ ಮತ್ತು ದೀಕ್ಷಿತ್ ಪೈ ಮುನಿಯಾಲು ಉಪಸ್ಥಿತರಿದ್ದರು.





























































































































error: Content is protected !!
Scroll to Top