ಕಾರ್ಕಳ: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪಂಜ ಕುಸ್ತಿಯಲ್ಲಿ (ಆರ್ಮ್ ರೆಸ್ಲಿಂಗ್) ಕಾರ್ಕಳದ ಜೋಡುರಸ್ತೆಯ ಪ್ರಸಾದ್ ಪೂಜಾರಿ 2 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂಜ ಕುಸ್ತಿಗೆ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಇವರು ಜೋಡುರಸ್ತೆಯ ಫ್ರೆಂಡ್ಸ್ ಪವರ್ ಜಿಮ್ನಲ್ಲಿ ಮೊಹಮದ್ ಅಲಿ ತರಬೇತಿ ಪಡೆಯುತ್ತಿದ್ದಾರೆ.
ಪಂಜ ಕುಸ್ತಿಯಲ್ಲಿ ಪ್ರಸಾದ್ ಪೂಜಾರಿಗೆ 3 ಪದಕ






























































