ಜ. 5 – 6 : ಹೆರ್ಮುಂಡೆ ಶಾಲೆಯಲ್ಲಿ ಸಾಂಸ್ಕೃತಿಕ ಸಂಭ್ರಮ

ಕಾರ್ಕಳ : ಹೆರ್ಮುಂಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಸಂಭ್ರಮ ಜ. 5 ಮತ್ತು 6 ರಂದು ನಡೆಯಲಿದೆ.

ಧ್ವಜಾರೋಹಣ
ಜ. 5ರಂದು ಬೆಳಗ್ಗೆ 9.30ಕ್ಕೆ ಮರ್ಣೆ ಗ್ರಾ. ಪಂ. ಉಪಾಧ್ಯಕ್ಷೆ ಮೇರಿ ಮಸ್ಕರೇನಸ್‌ ಧ್ವಜಾರೋಹಣ ಮಾಡಲಿರುವರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಆನಂದ ಹೆಗ್ಡೆ, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಿತೇಶ್‌ ಶೆಟ್ಟಿ, ಹೆರ್ಮುಂಡೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಂಕರ ಪೂಜಾರಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಕೃಷ್ಣ ಆಚಾರ್ಯ, ವಿಶ್ವಫ್ರೆಂಡ್ಸ್‌ ಅಧ್ಯಕ್ಷ ವಿಷ್ಣುಪ್ರಸಾದ್‌, ಸಮತಾ ಸೈನಿಕ ದಳದ ಅಧ್ಯಕ್ಷ ಶೀನ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮ
ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿರುವರು. ಮರ್ಣೆ ಗ್ರಾ. ಪಂ. ಅಧ್ಯಕ್ಷೆ ಪ್ರಭಾವತಿ ನಾಯಕ್‌ ಅಧ್ಯಕ್ಷತೆ ವಹಿಸಲಿರುವರು. ನಿವೃತ್ತ ಮುಖ್ಯ ಶಿಕ್ಷಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುನಿರಾಜ ರೆಂಜಾಳ ಪ್ರಧಾನ ಭಾಷಣ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಜ. 6 ರಂದು ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರು ಬಿಬಿಎಂಪಿ ವಿಶೇಷ ಆಯುಕ್ತರು ಡಾ. ಹರೀಶ್‌ ಕುಮಾರ್‌ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮ
ಜ. 5 ರಂದು ಸಂಜೆ 7 ಗಂಟೆಗೆ ಹೆರ್ಮುಂಡೆ ಮತ್ತು ಶಾಂತಿನಗರ ಅಂಗನವಾಡಿ ಕೇಂದ್ರದ ಪುಟಾಣಿಗಳಿಂದ ನೃತ್ಯೋಲ್ಲಾಸ, ರಾತ್ರಿ 8 ಗಂಟೆಗೆ ಶಾಲಾ ವಿದ್ಯಾರ್ಥಿಗಳಿಂದ ನಲಿತ-ಕುಣಿತ-ಪ್ರಹಸನ ನಂತರ ಹಳೆವಿದ್ಯಾರ್ಥಿನಿಯರಿಂದ ತುಳು ಸಾಮಾಜಿಕ ನಾಟಕ ಈ ಯಾಪ ಸುಧಾರುವ ಪ್ರದರ್ಶನಗೊಳ್ಳಲಿದೆ.

ಜ. 6 ರಂದು ಸಂಜೆ 7.30ಕ್ಕೆ ಹಳೆವಿದ್ಯಾರ್ಥಿಗಳಿಂದ ಹೆಜ್ಜೆ ಗೆಜ್ಜೆ, ರಾತ್ರಿ 10 ಗಂಟೆಗೆ ಹಳೆ ವಿದ್ಯಾರ್ಥಿಗಳಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಕಥೆ ಏರ್‌ ಬರೆಪೆರ್‌ ನಾಟಕ ಪ್ರದರ್ಶನಗೊಳ್ಳಲಿದೆ.





























































































































error: Content is protected !!
Scroll to Top