ಮಂಗಳೂರು : ನಗರದ ಅತ್ತಾವರದಲ್ಲಿ ವಸತಿ ಸಮುಚ್ಚಯದ 12ನೇ ಮಹಡಿಯಲ್ಲಿ ನ. 28 ರ ಮುಂಜಾನೆ ಅಗ್ನಿ ಅನಾಹುತ ಸಂಭವಿಸಿದ್ದು, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಸಹೈನ್ ಮುಸಾಬ್ (57) ಮೃತಪಟ್ಟ ಮಹಿಳೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ. ಒಂಭತ್ತು ಮಂದಿ ಇದ್ದ ಫ್ಲ್ಯಾಟ್ನಲ್ಲಿ ಈ ಘಟನೆ ನಡೆದಿದ್ದು, ಇತರರು ಹೊರ ಬಂದಿದ್ದರು. ಆದರೆ ಮುಸಾಬ್ ಶೌಚಾಲಯದೊಳಗಿದ್ದ ಕಾರಣ ಹೊರಬರಲಾಗದೇ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮನೆಯೊಳಗಿದ್ದ ಪೀಠೋಪಕರಣಗಳು ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಸಂಭವಿಸಿದ್ದು ಪಾಂಡೇಶ್ವರ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದಾರೆ.

































































