ಶಿರ್ವ ಮಹಿಳಾ ಮಂಡಲದ ನೂತನ ಅಧ್ಯಕ್ಷರಾಗಿ ಡಾ. ಸ್ಪೂರ್ತಿ ಪಿ. ಶೆಟ್ಟಿ – ಕಾರ್ಯದರ್ಶಿಯಾಗಿ ಐರಿನ್ ಲುಸ್ರಾದೋ

ಕಾರ್ಕಳ : ಶಿರ್ವ ಮಹಿಳಾ ಮಂಡಲದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಸೋಸಿಯೇಟ್ ಪ್ರೊಫೆಸರ್ ಡಾ. ಸ್ಪೂರ್ತಿ ಪಿ. ಶೆಟ್ಟಿ, ಕಾರ್ಯದರ್ಶಿಯಾಗಿ ಐರಿನ್ ಲುಸ್ರಾದೋ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಮಂಡಲದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಕಳೆದ ಮೂರು ವರ್ಷಗಳಿಂದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಪೂರ್ತಿ ಪಿ. ಶೆಟ್ಟಿ ಅವರು ನಿರ್ಗಮನ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರಿಂದ ಅಧಿಕಾರವನ್ನು ಸ್ವೀಕರಿಸಿದರು. ನೂತನ ಕಾರ್ಯಕಾರಿ ಮಂಡಳಿಯ ಗೌರವ ಸಲಹೆಗಾರರಾಗಿ ಗೀತಾ ವಾಗ್ಳೆ, ಗೌರವಾಧ್ಯಕ್ಷರಾಗಿ ಬಬಿತಾ ಜಗದೀಶ್ ಅರಸ, ಉಪಾಧ್ಯಕ್ಷರಾಗಿ ಗೀತಾ ಮೂಲ್ಯ, ಜೊತೆ ಕಾರ್ಯದರ್ಶಿಯಾಗಿ ಗೌರಿ ಶೆಣೈ, ಕೋಶಾಧಿಕಾರಿಯಾಗಿ ದೀಪಾ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮರಿಯಾ ಜೆಸಿಂತ ಫುರ್ಟಾಡೋ, ಸುಮತಿ ಜಯಪ್ರಕಾಶ್ ಸುವರ್ಣ, ಜಯಶ್ರೀ ಜಯಪಾಲ್ ಶೆಟ್ಟಿ, ಮಾಲತಿ ಮುಡಿತ್ತಾಯ, ಸುನೀತಾ ಸದಾನಂದ್, ಪುಷ್ಪಾ ಆಚಾರ್ಯ, ವಸಂತಿ ಗೋಪಾಲ್, ಗ್ಲಾಡಿಸ್ ಅಲ್ಮೇಡಾ, ಸುಮಾ ಬಾಮನ್, ಆಫ್ರಿನ್ ಬಾನು ಆಯ್ಕೆಯಾದರು.

ಇದೇ ಸಂದರ್ಭ ಶಿರ್ವ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ರಾಜೇಶ್ ಅವರನ್ನು ಸನ್ಮಾನಿಸಲಾಯಿತು. ಗೀತಾ ವಾಗ್ಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾ ಆಚಾರ್ಯ ಮತ್ತು ಸುನೀತಾ ಸದಾನಂದ್ ಪ್ರಾರ್ಥಿಸಿದರು. ಗೌರವಾಧ್ಯಕ್ಷೆ ಬಬಿತಾ ಜಗದೀಶ್ ಅರಸ ಸ್ವಾಗತಿಸಿ, ಹಿರಿಯ ಸದಸ್ಯೆ ಸುಮತಿ ಜಯಪ್ರಕಾಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಐರಿನ್ ಲುಸ್ರಾದೋ ವಂದಿಸಿದರು.

































































































































































error: Content is protected !!
Scroll to Top