ನೀರೆ ಗ್ರಾಮ ಪಂಚಾಯತ್‌ನಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಸನ್ಮಾನ

ಕಾರ್ಕಳ : ದೈವಾರಾಧನೆ ಕ್ಷೇತ್ರದ ಸಾಧನೆಗಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ನೀರೆ ಗ್ರಾಮದ ಬೀರು ಪಾಣಾರ ಹಾಗೂ ಕಣಂಜಾರು ಗ್ರಾಮದ ಗೋವಿಂದ ಬಂಗೇರ ಅವರಿಗೆ ನ. 10 ರಂದು ನೀರೆ ಗ್ರಾಮ ಪಂಚಾಯತ್‌ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಭೂ ನ್ಯಾಯ ಮಂಡಳಿ ಸದಸ್ಯ ವಿಕ್ರಂ ಹೆಗ್ಡೆ, ಪಂಚಾಯತ್ ಸದಸ್ಯರು, ಪಿಡಿಓ ಅಂಕಿತಾ ನಾಯಕ್, ಮಾಜಿ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ, ನಿವೃತ್ತ ಶಿಶು ಕಲ್ಯಾಣ ಅಧಿಕಾರಿ ಸದಾನಂದ ನಾಯಕ್, ಗ್ರಾಮ ಕರಣಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

































































































































































error: Content is protected !!
Scroll to Top