ಈಶಾನ್ಯ ರಾಜ್ಯಗಳ ರಾಜ್ಯಪಾಲ ಉಡುಪಿಯ ಪಿ. ಬಿ. ಆಚಾರ್ಯ ನಿಧನ

ಉಡುಪಿ : ನಾಗಾಲ್ಯಾಂಡ್‌ ಸೇರಿದಂತೆ ಹಲವು ಈಶಾನ್ಯ ರಾಜ್ಯಗಳ ರಾಜ್ಯಪಾಲರಾಗಿದ್ದ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ನ.10 ರಂದು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು.

ಮೂಲತಃ ಉಡುಪಿಯವರಾದ ಪಿ .ಬಿ. ಆಚಾರ್ಯ ಬಾಲಕೃಷ್ಣ ಮತ್ತು ರಾಧಾ ಆಚಾರ್ಯ ಅವರ ಪುತ್ರ. ಅವರು ಎಂ ಜಿ ಎಂ ಕಾಲೇಜಿನ ಪ್ರಥಮ ಬ್ಯಾಚ್‌ ನ ವಿದ್ಯಾರ್ಥಿಯಾಗಿದ್ದರು ಪಿ.ಬಿ.ಆಚಾರ್ಯ ಅವರು ತ್ರಿಪುರಾ, ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಕರ್ತವ್ಯ ಸಲ್ಲಿಸಿದ್ದರು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಆಚಾರ್ಯ ಅವರು ಎಬಿವಿಪಿ, ಆರ್‌ಎಸ್‌ಎಸ್‌ನ ಉನ್ನತ ಹುದ್ದೆಗಳಲ್ಲೂ ಕಾರ್ಯನಿರ್ವಹಿಸಿದ್ದರು.

ಮಾರ್ಗರೆಟ್ ಆಳ್ವಾ ನಂತರ ರಾಜ್ಯಪಾಲರ ಹುದ್ದೆಗೆ ಆಯ್ಕೆಯಾದ ಕರಾವಳಿ ಕರ್ನಾಟಕದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಇವರಿಗಿತ್ತು.

ಮೃತರು ಪತ್ನಿ, ಪುತ್ರಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.































































































































































error: Content is protected !!
Scroll to Top