ಆರೋಗ್ಯಧಾರ : ಪಪ್ಪಾಯ ಹಣ್ಣಿನ ಆರೋಗ್ಯ ಲಾಭಗಳು

ಹಣ್ಣುಗಳಲ್ಲಿ ಅತ್ಯಂತ ಆರೋಗ್ಯದಾಯಕ ಹಣ್ಣು ಪಪ್ಪಾಯ. ಮೂಲವ್ಯಾಧಿ, ಮಲಬದ್ಧತೆಯಲ್ಲಿ ಅತ್ಯುಪಯೋಗಿ. ಇದನ್ನು ಮನೆಯಲ್ಲಿ ಬೀಜದಿಂದ ಸುಲಭವಾಗಿ ಬೆಳೆಯಬಹುದು. ಯಾವುದೇ ಆರೈಕೆ ಅವಶ್ಯಕತೆ ಇರುವುದಿಲ್ಲ. ಇದರ ಎಲೆ ಹಾಗೂ ಬೀಜ ಕೂಡ ಔಷಧ ಗುಣ ಹೊಂದಿದೆ. ಇದರ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ.
ಬೊಟಾನಿಕಲ್ ನೇಮ್- carica Papaya
ಪಪ್ಪಾಯಿ ಹಣ್ಣಿನ ಗುಣಗಳು-
ರುಚಿಯಲ್ಲಿ ಖಾರ ಹಾಗೂ ಕಹಿ. ಲಘು (ಬೇಗ ಜೀರ್ಣವಾಗುವಂತಹ), ರೂಕ್ಷ( ಶುಷ್ಕ) ತೀಕ್ಷ್ಣ ಗುಣ ಇದರದ್ದು. ಸ್ವಭಾವದಲ್ಲಿ ಉಷ್ಣ ವೀರ್ಯ. ಕಫ ಹಾಗೂ ವಾತಹರ.
ಪ್ರಯೋಗಿಸುವ ಅಂಗ – ಹಣ್ಣು, ಎಲೆ, ಬಿಜ.


ಆರೋಗ್ಯ ಲಾಭಗಳು-
• ಹೃದಯಕ್ಕೆ ಒಳ್ಳೆಯದು.
• ಕಣ್ಣಿನ ಸಮಸ್ಯೆಯನ್ನು ನಿವಾರಿಸುತ್ತದೆ.
• ಅತಿಸಾರದಲ್ಲಿ ಅತ್ಯುಪಯೋಗಿ.
• ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.
• ನೆಗಡಿ, ಕೆಮ್ಮು, ಅಸ್ತಮಾ, ಶ್ವಾಸಕೋಶದ ರೋಗಗಳಲ್ಲಿ ಉಪಯುಕ್ತ.
• ಉರಿಯೂತ ಹಾಗೂ ಶೋಥವನ್ನು ಕಡಿಮೆ ಮಾಡುತ್ತದೆ.
• ಹಣ್ಣನ್ನು ದಿನಾಲು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
• ಪಪ್ಪಾಯ ಕಾಯಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಜಂತುಹುಳು, ಮೂಲವ್ಯಾಧಿಗಳಿಗೆ ಒಳ್ಳೆಯ ಮದ್ದು.
• ಎಲೆಯನ್ನು ಬಿಸಿ ಮಾಡಿ ತ್ವಚೆಯ ಮೇಲೆ ಊತವಿರುವ ಜಾಗಕ್ಕೆ ಹಚ್ಚಿದರೆ ನೋವು, ಶೋಥ ಕಡಿಮೆಯಾಗುವುದು.
• ಹಣ್ಣನ್ನು ದಿನಾಲೂ ಸೇವಿಸಿದರೆ ಮಾಂಸ ಖಂಡಗಳಿಗೆ ಬಲ ನೀಡುತ್ತದೆ.
• ಜೀರ್ಣಾಂಗದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
• ಪಪ್ಪಾಯ ಹಣ್ಣನ್ನು ಜೇನುತುಪ್ಪದ ಜೊತೆ ಸೇರಿಸಿ ಮಕ್ಕಳಿಗೆ ನೀಡಿದರೆ ನರ ದೌರ್ಬಲ್ಯ ದೂರವಾಗುತ್ತದೆ.
• ಪಪ್ಪಾಯ ಹಣ್ಣಿನ ಪೇಸ್ಟ್ ಅನ್ನು ಮೊಸರಿನ ಜೊತೆ ಸೇರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
• ಹಣ್ಣಿನ ಪೇಸ್ಟ್ ಜೇನುತುಪ್ಪ ಜೊತೆ ಸೇರಿಸಿ ಮುಖದ ಮೇಲೆ ಹಚ್ಚಿ ಒಣಗಿದ ನಂತರ ತಣ್ಣೀರಿನಲ್ಲಿ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.
• ದಿನಾಲು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.
ಯಾರು ಇದನ್ನು ಸೇವಿಸಬಾರದು:
ಇದು ಉಷ್ಣ ವೀರ್ಯವಾಗಿರುವುದರಿಂದ ಗರ್ಭವತಿ ಸ್ತ್ರೀಯರು ಇದನ್ನು ಜಾಗರೂಕವಾಗಿ ಉಪಯೋಗಿಸಬೇಕು.































































































error: Content is protected !!
Scroll to Top