ಗಾನ, ನೃತ್ಯ, ನೃತ್ಯರೂಪಕ, ಯಕ್ಷಗಾನ, ನಾಟಕಗಳ ರಸಪಾಕ
ಕಾರ್ಕಳ: ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಅ.15ರಿಂದ 23ರವರೆಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅ. 15ರಂದು ಮಧ್ಯಾಹ್ನ 2.30ರಿಂದ 5.30ರ ತನಕ ಮಹಮ್ಮಾಯಿ ಮುಖ್ಯಪ್ರಾಣ ಯಕ್ಷಗಾನ ಕಲಾ ಮಂಡಳಿ ಕಾರ್ಕಳ ಇವರಿಂದ ಯಕ್ಷಗಾನ ತಾಳಮದ್ದಳೆ “ಕರ್ಣಾರ್ಜುನ”, ಸಾಯಂಕಾಲ 7.30ರಿಂದ ಗಣೇಶ್ ಎಡಪದವು ಸಾರಥ್ಯದ “ಡ್ಯಾನ್ಸಿಂಗ್ ಸ್ಟಾರ್ಸ್ ಡ್ಯಾನ್ಸ್ ಅಕಾಡೆಮಿ” ಎಡಪದವು ಮಂಗಳೂರು ಇವರಿಂದ ನೃತ್ಯ-ಗಾನ-ವೈಭವ, ಅ. 16ರಂದು ಸಂಜೆ 7.30ರಿಂದ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ದಾಪುರ ಯಕ್ಷಕಲಾ ತಂಡದವರಿಂದ ಯಕ್ಷಗಾನ ಬಯಲಾಟ “ಚಂದ್ರಹಾಸ ಚರಿತ್ರೆ”
ಅ. 17ರಂದು ಸಂಜೆ 7.30ಕ್ಕೆ ಸವಿಗಾನ ಮೆಲೋಡಿಸ್ ಕಾರ್ಕಳ ಇವರಿಂದ ಕೆ. ಪಿ. ಪ್ರಕಾಶ್ ಸಾರಥ್ಯದಲ್ಲಿ ಸುಗಮ ಸಂಗೀತ ಮತ್ತು ನೃತ್ಯ ವೈಭವ, ಅ. 18ರಂದು ಸಂಜೆ 7.30ಕ್ಕೆ ಮಜಾ ಟಾಕೀಸ್ ಖ್ಯಾತಿಯ ಮೋಹನ್ ಮತ್ತು ತಂಡದವರಿಂದ “ಗಾನ ನಾದಾಭಿಷೇಕಂ” (ಭಕ್ತಿ ಭಾವ ಗೀತೆಗಳು), ಅ. 19ರಂದು ಸಂಜೆ 7.30ಕ್ಕೆ ಲಕ್ಷ್ಮೀ ಗುರುರಾಜ್ ಎನ್. ಎನ್. ಯು ಕೊಡವೂರು ಇವರಿಂದ “ನೃತ್ಯ ನೀರಾಜನಂ” ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಅ. 20ರಂದು ಸಂಜೆ 7.30ಕ್ಕೆ ಧರ್ಮಯೋಗಿ ಪ್ರೊಡಕ್ಷನ್ಸ್ ಮುದ್ರಾಡಿ ಅರ್ಪಿಸುವ “ಸರ್ಪ ಸಂಪಿಗೆ” ರಚನೆ-ಚಂದ್ರಶೇಖರ್ ಕಂಬಾರ, ತುಳುವಿಗೆ-ಚೇತನ್ ನೀರೆ, ನಿರ್ದೇಶನ- ಸುರೇಂದ್ರ ಮೋಹನ್ ಮುದ್ರಾಡಿ,

ಅ. 21ರಂದು 7.30ಕ್ಕೆ ಶ್ರೀ ನೃತ್ಯಾಲಯ ಕಾರ್ಕಳ ಇವರಿಂದ ವಿದ್ವಾನ್ ಸುಬ್ರಹ್ಮಣ್ಯ ನಾವಡ ನಿರ್ದೇಶನದಲ್ಲಿ “ನೃತ್ಯೋಲ್ಲಾಸ” (ಭರತನಾಟ್ಯ ಪ್ರದರ್ಶನ), ಅ. 22ರಂದು 7.30ಕ್ಕೆ ರಂಗ ತರಂಗ ಕಲಾವಿದರು ಕಾಪು ಇವರಿಂದ ತುಳು ನಾಟಕ “ಬುಡೆದಿ”, ಅ. 23ರಂದು ಸಂಜೆ 7.30ಕ್ಕೆ ಐಸಿರ ಡ್ಯಾನ್ಸ್ ಅಕಾಡೆಮಿ ಕಾರ್ಕಳ ಇವರಿಂದ ಸುಕೇಶ್ ಶೆಟ್ಟಿ ಸಾರಥ್ಯದಲ್ಲಿ “ಕೊಲ್ಲೂರು ಮೂಕಾಂಬಿಕಾ” ನೃತ್ಯರೂಪಕ ಜರುಗಲಿದೆ.


















