ಫ್ಲಾಟ್‌ನಲ್ಲಿ ಬಚ್ಚಿಟ್ಟಿದ್ದ ನೋಟಿನ ಬಂಡಲ್‌ಗಳು
ಬೆಂಗಳೂರು : ನಗರದಲ್ಲಿ ನಿನ್ನೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದೆ. ಬುಧವಾರ ಸಂಜೆ ನಂತರ ಐಟಿ ಅಧಿಕಾರಿಗಳು ನಗರದ ಹಲವು ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿ ಪರಿಶೋಧನೆ ನಡೆಸಿದ್ದಾರೆ. ತಡರಾತ್ರಿ ತನಕ ಕಾರ್ಯಾಚರಣೆ ಮುಂದುವರಿದಿದ್ದು, ಈ ವೇಳೆ ನಗದು ಸಹಿತ ಕೋಟಿಗಟ್ಟಲೆ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿ 23 ಬಾಕ್ಸ್‌ಗಳಲ್ಲಿ ಭರ್ತಿಯಾಗಿದ್ದ 500 ರೂಪಾಯಿ ನೋಟು ಪತ್ತೆಯಾಗಿದೆ.
ಫ್ಲಾಟ್‌ನ ಕೊಠಡಿಯ ಮಂಚವೊಂದರ ಅಡಿಯಲ್ಲಿ ಕೋಟ್ಯಂತರ ಹಣವನ್ನು ಬಚ್ಚಿಡಲಾಗಿತ್ತು. 23 ಬಾಕ್ಸ್‌ಗಳಲ್ಲಿ ಹಣ ಪತ್ತೆಯಾಗಿದ್ದು, ಕಾರಿನಲ್ಲಿ ಬೇರೆ ಕಡೆ ಸಾಗಿಸಲು ತಯಾರಿ ಮಾಡಲಾಗಿತ್ತು ಎಂದು ಹೇಳಲಾಗಿದೆ. ಬುಧವಾರ ಸಂಜೆ 6 ಗಂಟೆ ವೇಳೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ಹಣವನ್ನು ವಶಕ್ಕೆ ಪಡೆದರು.
ಕೋಟ್ಯಂತರ ರೂಪಾಯಿ ಹಣ ಪತ್ತೆಯಾದ ಬಳಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಣೇಶ ಬ್ಲಾಕ್‌ನಲ್ಲಿರುವ 95ನೇ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಮತ್ತು ಆಕೆಯ ಪತಿ ಆರ್. ಅಂಬಿಕಾಪತಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ.
ಸದ್ಯಕ್ಕೆ ಪತ್ತೆಯಾಗಿರುವ ಕೋಟ್ಯಂತರ ರೂಪಾಯಿ ಹಣ ಯಾರಿಗೆ ಸೇರಿದ್ದು ಎನ್ನುವ ಬಗ್ಗೆ ಅಧಿಕಾರಿಗಳು ವಿಚಾರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ, ಫ್ಲಾಟ್ ಯಾರ ಒಡೆತನಕ್ಕೆ ಸೇರಿದೆ, ಹಣ ಯಾವುದು, ಎಲ್ಲಿಗೆ ಸಾಗಿಸಲು ಸಂಗ್ರಹಿಸಲಾಗಿತ್ತು ಎನ್ನುವುದು ಇನ್ನೂ ಪತ್ತೆಯಾಗಬೇಕಿದೆ.



















