ದಾಲ್ಚೀನಿಯ ಆರೋಗ್ಯ ಲಾಭಗಳು

ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವಂತಹ ದಾಲ್ಚಿನಿಯು ನಿಗದಿತ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಅನೇಕ ಲಾಭವನ್ನುಂಟು ಮಾಡುತ್ತದೆ. ಇದರ ಪರಿಮಳದಿಂದ ಅನೇಕ ಅಡುಗೆಗಳಲ್ಲಿ ಬಳಸುತ್ತಾರೆ. ಇದರ ಬಗ್ಗೆ ತಿಳಿದುಕೊಳ್ಳೋಣ.
ಸಂಸ್ಕೃತದಲ್ಲಿ ತ್ವಕ್ ಎಂದು ಕರೆಯುತ್ತಾರೆ.
ಬೊಟಾನಿಕಲ್ ನೇಮ್- Cinnamomum zylanica

ದಾಲ್ಚೀನಿಯ ಗುಣಗಳು-
ರುಚಿಯಲ್ಲಿ ಖಾರ ಕಹಿ ಹಾಗೂ ಸಿಹಿ ಇರುತ್ತದೆ. ಲಘು(ಶೀಘ್ರ ಜೀರ್ಣವಾಗುವಂಥದ್ದು) ತೀಕ್ಷ್ಣ ಹಾಗೂ ಶುಶ್ಕತೆ ಇದರ ಗುಣಗಳು. ಸ್ವಭಾವದಲ್ಲಿ ಉಷ್ಣವೀರ್ಯ.
ದೋಷದ ಮೇಲೆ ಪ್ರಭಾವ – ವಾತ ಹಾಗೂ ಕಫದೋಷವನ್ನು ಸಮತೋಲನದಲ್ಲಿಡುತ್ತದೆ. ಪಿತ್ತದೋಷವನ್ನು ಹೆಚ್ಚಿಸುತ್ತದೆ.
ಉಪಯೋಗಿಸುವ ಅಂಗ- ತೊಗಟೆ, ಎಲೆ. ಇದರಲ್ಲಿ ಅನೇಕ ಔಷಧಿ ಗುಣಗಳಿವೆ. ಇದರ ಎಣ್ಣೆಯೂ ಕೂಡ ಬಳಸುತ್ತಾರೆ.
ಸೇವಿಸುವ ಪ್ರಮಾಣ- ಚೂರ್ಣ ಒಂದರಿಂದ ಮೂರು ಗ್ರಾಂ.


ಆರೋಗ್ಯ ಲಾಭಗಳು-
• ಚಿಕ್ಕ ದಾಲ್ಚಿನ್ನಿ ತುಂಡನ್ನು ಬಾಯಲ್ಲಿ ಹಾಕಿ ಚೀಪುವುದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುವುದಲ್ಲದೆ ಹಲ್ಲುಗಳಿಗೆ ವಸುಡಿಗೆ ಬಲ ನೀಡುತ್ತದೆ.
• ಕೀಟ ಕಡಿದಾಗ ಇದರ ಎಣ್ಣೆಯನ್ನು ಹಚ್ಚುವುದರಿಂದ ಗುಣವಾಗುತ್ತದೆ.
• ದೇಹದಲ್ಲಿನ ವಿಷಕಾರಕ ಅಂಶವನ್ನು ಹೊರಹಾಕುತ್ತದೆ. ಅಡುಗೆಗಳಲ್ಲಿ ಇದನ್ನು ಬಳಸಿ.
• ಶೀತ ,ನೆಗಡಿ, ಕೆಮ್ಮು, ಗಂಟಲು ಕೆರೆತ, ಅಸ್ತಮಾ ಇದ್ದರೆ ಇದರ ಕಾಲು ಚಮಚ ಚೂರ್ಣವನ್ನು ಜೇನುತುಪ್ಪದ ಜೊತೆ ಸೇವಿಸಿ. ಇದು ಕಫವನ್ನು ಕರಗಿಸಿ ಹೊರ ಹಾಕುತ್ತದೆ. ತಲೆನೋವನ್ನು ಕೂಡ ಗುಣಪಡಿಸಬಹುದು.
• ಚಿಕ್ಕ ತುಂಡನ್ನು ಬಾಯಲ್ಲಿ ಹಾಕಿ ಚೀಪೋದರಿಂದ ಅರುಚಿ ಹೋಗಲಾಡಿಸುತ್ತದೆ.ಅಜೀರ್ಣದಲ್ಲಿ ಸಹಾಯಕ. ಜಂತು ಹುಳುಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
• ಬಿಪಿ, ಡಯಾಬಿಟಿಸ್ , ಕೊಲೆಸ್ಟರಾಲ್‌ ಕಡಿಮೆ ಮಾಡುತ್ತದೆ. ಹೃದಯಕ್ಕೆ ಹಿತಕರ.
• ಇದರ ಪೇಸ್ಟ್ ಹಚ್ಚುವುದರಿಂದ ತ್ವಚೆಯ ರೋಗಗಳಲ್ಲಿ, ಎಲರ್ಜಿ’ ತುರಿಕೆ ಕಡಿಮೆಯಾಗುವುದು.
• ಇದರ ಚೂರ್ಣ ಜೇನುತುಪ್ಪದ ಜೊತೆ ಬೆರೆಸಿ ಸವರುವುದರಿಂದ ಗಾಯವನ್ನು ಗುಣಪಡಿಸುವುದು.
• ವಾಂತಿ, ಭೇದಿಯಲ್ಲಿ ಕಷಾಯ ಮಾಡಿ ಕುಡಿಬಹುದು. ಮೂಲವ್ಯಾಧಿಯಲ್ಲಿ ಉಪಯುಕ್ತ. ರಕ್ತ ಶುದ್ಧಿಯನ್ನು ಮಾಡುತ್ತದೆ.
• ಕಷಾಯ ಮಾಡುವ ವಿಧಾನ. ಒಂದು ಲೋಟ ನೀರಿಗೆ ಒಂದು ಚಮಚ ದಾಲ್ಚಿನಿ ಚೂರ್ಣವನ್ನು ಹಾಕಿ ಕುದಿಸಿ ಕಾಲು ಕಪ್ ಬರುವವರೆಗೆ ಕುದಿಸಿ ಸೋಸಿ ಸೇವಿಸಿರಿ. ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಸೇವಿಸಬಹುದು.
• ದಾಲ್ಚಿನಿಯಾ ಚಹಾ ಮಾಡುವ ವಿಧಾನ. ಒಂದು ಲೋಟ ನೀರಿಗೆ ನಾಲ್ಕೈದು ತುಳಸಿ ಎಲೆಗಳು, ಚಿಕ್ಕ ಶುಂಠಿಯ ತುಂಡು, ದಾಲ್ಚಿನಿಯ ಚಿಕ್ಕ ತುಂಡು ಹಾಕಿ ಕುದಿಸಿ ಚಹವನ್ನು ತಯಾರಿಸಿ. ಇದಕ್ಕೆ ಬೆಲ್ಲ ಹಾಕಿ ಸೇವಿಸಿರಿ. ಹೀಗೆ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಕ್ಯಾನ್ಸರ್ ಹಬ್ಬುವುದನ್ನು ತಡೆಯುವುದು, ಮಂಡಿ ನೋವನ್ನು ಕಡಿಮೆ ಮಾಡಬಹುದು.
• ಯಾರು ಸೇವಿಸಬಾರದು-
ದಾಲ್ಚಿನಿಯು ಉಷ್ಣವೀರ್ಯ ಹಾಗೂ ಪಿತ್ತವನ್ನು ಹೆಚ್ಚಿಸುವುದರಿಂದ ಗ್ಯಾಸ್ಟ್ರಟಿಸ್, ಪಿತ್ತ ಪ್ರಕೃತಿಯವರು, ರಕ್ತಸ್ರಾವ ಇರುವ ರೋಗಗಳಲ್ಲಿ ಉಪಯೋಗಿಸಬಾರದು. ಮಹಿಳೆಯರಲ್ಲಿ ಮುಟ್ಟಾದಾಗ ಸೇವಿಸಬಾರದು.





























































































error: Content is protected !!
Scroll to Top