ಕಾರ್ಕಳ : ಶ್ರೀ.ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ಮಿಯ್ಯಾರು ಎ ಮತ್ತು ಬಿ ಹಾಗೂ ಜೋಡುಕಟ್ಟೆ ಒಕ್ಕೂಟದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಇತ್ತೀಚೆಗೆ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯಂದ್ರ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕುಕ್ಕುಂದೂರು ಕೆ .ಎಂ. ಇ. ಎಸ್. ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರು ಮಾನವೀಯ ಮೌಲ್ಯಗಳ ಕುರಿತು ಅರಿವು ಮೂಡಿಸಿದರು. ಗ್ರಾ. ಪಂ. ಅಧ್ಯಕ್ಷೆ ಸನ್ಮತಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಮಿಯ್ಯಾರು ಎ ಒಕ್ಕೂಟದ ಅಧ್ಯಕ್ಷರಾಗಿ ಶಾಂತ ದೇವಾಡಿಗ, ಬಿ ಒಕ್ಕೂಟದ ಅಧ್ಯಕ್ಷರಾಗಿ ವಿಠ್ಠಲ್ ಎಸ್. ಪೂಜಾರಿ, ಜೋಡುಕಟ್ಟೆ ಒಕ್ಕೂಟದ ಅಧ್ಯಕ್ಷರಾಗಿ ಶೇಖರ್ ಶೆಟ್ಟಿ ಅಧಿಕಾರ ಸ್ವೀಕರಿಸಿದರು. ಯೋಜನಾಧಿಕಾರಿ ಹೇಮಲತಾ ಅವರು ಯೋಜನೆಯ ಕುರಿತು ಮಾಹಿತಿ ನೀಡಿದರು. ಮಿಯ್ಯಾರು ವಲಯಾಧ್ಯಕ್ಷ ಪ್ರಶಾಂತ್ ಡಿಸೋಜ ಸಂದರ್ಭೋಚಿತವಾಗಿ ಮಾತನಾಡಿದರು. ವಿಠ್ಠಲ್ ಎಸ್. ಪೂಜಾರಿ ಸ್ವಾಗತಿಸಿ, ಸೇವಾಪ್ರತಿನಿಧಿ ಸುರೇಖ ವರದಿ ವಾಚಿಸಿದರು. ಅಶ್ವಿನಿ ಪದಾಧಿಕಾರಿಗಳ ಪರಿಚಯ ಮಾಡಿದರು. ವಲಯ ಮೇಲ್ವಿಚಾರಕಿ ಯಶೋಧ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸೇವಾಪ್ರತಿನಿಧಿ ಯಶೋಧರ್ ಹಾಗೂ ವಿ. ಎಲ್. ಇ. ಅನುಷಾ ಶೆಟ್ಟಿ ಸಹಕರಿಸಿದರು.