ಎಸ್‌ಕೆಪಿಎ ಜಿಲ್ಲಾಧ್ಯಕ್ಷರಾಗಿ ಪದ್ಮಪ್ರಸಾದ್‌ ಜೈನ್‌

ಮಂಗಳೂರು : ದ.ಕ. ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ನೂತನ ಅಧ್ಯಕ್ಷರಾಗಿ ಕಾರ್ಕಳ ಶಿಲ್ಪಾ ಡಿಜಿಟಲ್ ಸ್ಟುಡಿಯೋ ಮಾಲಕ‌ ನೆಲ್ಲಿಕಾರು ಪದ್ಮಪ್ರಸಾದ್‌ ಜೈನ್‌ ಆಯ್ಕೆಯಾಗಿರುತ್ತಾರೆ. ಸೆ. 26 ರಂದು ಮಂಗಳೂರು ಸೆಬಾಸ್ಟಿಯನ್‌ ಹಾಲ್‌ನಲ್ಲಿ ಎಸ್‌ಕೆಪಿಎ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನ್ಯೂಸ್‌ ಕಾರ್ಕಳ ಸಲಹಾ ಸಮಿತಿ ಸದಸ್ಯರಾಗಿ, ಜೇಸಿಸ್‌ ಶಾಲಾ ಉಪಾಧ್ಯಕ್ಷರಾಗಿರುವ ಪದ್ಮಪ್ರಸಾದ್‌ ಜೈನ್‌ ಅವರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಓಶಿಯನಿಕ್‌ ಇನ್‌ಫ್ರಾ ಸಂಸ್ಥೆಯ ಪಾಲುದಾರರಾಗಿರುವ ಪದ್ಮಪ್ರಸಾದ್‌ ಅವರು ಯಶಸ್ವಿ ಉದ್ಯಮಿಯಾಗಿರುತ್ತಾರೆ. 2005ರಲ್ಲಿ ಕಾರ್ಕಳ ಜೇಸಿಐ ಅಧ್ಯಕ್ಷರಾಗಿ, ಭಾರತೀಯ ಜೇಸಿಸ್‌ನ ವಲಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದ ಪದ್ಮಪ್ರಸಾದ್‌ ಅವರು ಕಳೆದ ಅವಧಿಯಲ್ಲಿ ಎಸ್‌ಕೆಪಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ನೆಲ್ಲಿಕಾರು ಆಗಮ ದಿ. ರತ್ನವರ್ಮ ಶೆಟ್ಟಿ ಹಾಗೂ ಲಕ್ಷ್ಮೀಮತಿ ಪುತ್ರ.error: Content is protected !!
Scroll to Top