ಸೆ. 4 : ಮಣೆ ಮಂಚೊದ ಮಂತ್ರಮೂರ್ತಿ ನಾಟಕ ಪ್ರಥಮ ಪ್ರದರ್ಶನ

ಗೋಪಿನಾಥ್‌ ಭಟ್‌ ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ

ಮಂಗಳೂರು : ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ಸೆ. 4ರಂದು ಪುರಭವನದಲ್ಲಿ ಶ್ರೀಪ್ರಾಪ್ತಿ ಕಲಾವಿದೆರ್‌ ಕುಡ್ಲ ತಂಡದಿಂದ ಪ್ರಶಾಂತ್‌ ಸಿ.ಕೆ. ವಿರಚಿತ ನಾಟಕ ಮಣೆ ಮಂಚೊದ ಮಂತ್ರಮೂರ್ತಿಯ ಪ್ರಥಮ ಪ್ರದರ್ಶನಗೊಳ್ಳಲಿದೆ.
ಈ ಸಂದರ್ಭ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ, ರಂಗಭೂಮಿ ಕಲಾವಿದ, ಎಸ್‌ಸಿಡಿಸಿಸಿ ಬ್ಯಾಂಕ್‌ ಸಿಇಒ ಗೋಪಿನಾಥ್‌ ಭಟ್‌ ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಂದೇಶ್ವರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಸೆ. 4ರ ಸೋಮವಾರ ಸಂಜೆ 6 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಡಿ. ವೇದವ್ಯಾಸ ಕಾಮತ್‌, ನಿವೃತ್ತ ಸೇನಾಧಿಕಾರಿ ಕ್ಯಾ. ಬ್ರಿಜೇಶ್‌ ಚೌಟ, ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌, ಕಲಾಮಾಣಿಕ್ಯ ವಿಜಯ ಕುಮಾರ್‌ ಕೊಡಿಯಾಲಬೈಲ್‌, ಯು.ಟಿ. ಫರೀದ್‌ ಫೌಂಡೇಶನ್‌ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್‌, ನಿರ್ಮಾಪಕ ಪ್ರಕಾಶ್‌ ಪಾಂಡೇಶ್ವರ, ಕಲಾವಿದ/ ಪತ್ರಕರ್ತ ವಾಲ್ಟರ್‌ ನಂದಳಿಕೆ, ಪದ್ಮರಾಜ್‌ ಆರ್‌. ಮಾಧವ ನಾಯ್ಕ್‌ ಅಡ್ಯಾರ್‌, ಕುಂಜತ್ತೋಡಿ ವಾಸುದೇವ ಭಟ್‌, ಸಚ್ಚಿದಾನಂದ ಎಡಮಲೆ, ಪಮ್ಮಿ ಕೊಡಿಯಾಲಬೈಲ್‌, ವಿವೇಕಾನಂದ ಸನಿಲ್‌, ಧನರಾಜ್‌ಶೆಟ್ಟಿ ಮೊದಲಾದವರು ಭಾಗವಹಿಸುವರು.

ಪಾಡ್ದನ ಆಧಾರಿತ ನಾಟಕ
ಕಲಾ ಸವ್ಯಸಾಚಿ ಪ್ರಶಾಂತ್‌ಸಿ.ಕೆ. ನಿರ್ದೇಶನದಲ್ಲಿ ಪಾಡ್ದನ ಆಧರಿತ ತುಳು ನಾಟಕ ಮಣೆ ಮಂಚೊದ ಮಂತ್ರಮೂರ್ತಿ ಚೊಚ್ಚಲ ಪ್ರದರ್ಶನ ಆಯೋಜಿಸಲಾಗಿದೆ. ಇದೇ ಸಂದರ್ಭ ಹಿರಿಯ ದೈವಾರಾಧಕ ಸೀನಪ್ಪ ಶೆಡ್ಯ ಅವರಿಗೆ ಗೌರವ ಸನ್ಮಾನ ನಡೆಯಲಿದೆ.

ಸನ್ಮಾನಿತರ ಬಗ್ಗೆ
ಗೋಪಿನಾಥ್‌ ಭಟ್‌ ಅವರು ರಂಗಭೂಮಿಯಲ್ಲಿ 100ಕ್ಕೂ ಅಧಿಕ ಪಾತ್ರ ನಿರ್ವಹಿಸಿ 250ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್‌ ಯುವರ್‌ ಆನರ್‌ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುವ ಭಟ್‌ ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆerror: Content is protected !!
Scroll to Top