ಕಾರ್ಕಳ 2023-24ನೇ ಸಾಲಿನ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಲಗುಪ್ಪೆ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಕಾರ್ಕಳ : 2023-24ನೇ ಸಾಲಿನ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಿಯ್ಯಾರು ಕಲ್ಲಗುಪ್ಪೆ ಶಾಲೆಯ ಐದು ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಹತ್ತು ದ್ವಿತೀಯ ಮತ್ತು ಏಳು ಮಂದಿ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿರುತ್ತಾರೆ. ಸೆ. 1ರಂದು ಮಿಯ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ ಜರುಗಿತ್ತು. ಸ್ಪರ್ಧೆಯಲ್ಲಿ ಸಂಸ್ಕೃತ ಪಠಣ, ಭಕ್ತಿಗೀತೆ, ಆಶುಭಾಷಣ, ಕ್ಲೇ ಮಾಡಲಿಂಗ್‌, ಭಾವಗೀತೆ, ಚಿತ್ರಕಲೆ, ರಂಗವಲ್ಲಿ, ಲಘು ಸಂಗೀತ, ಛದ್ಮವೇಷ, ಅಭಿನಯ ಗೀತೆ, ಆಂಗ್ಲ ಭಾಷಣ, ಜಾನಪದ ಗೀತೆ, ಕನ್ನಡ ಕಂಠ ಪಾಠ ಹೀಗೆ ಹಲವಾರು ಸ್ಪರ್ಧೆಗಳು ಜರುಗಿದ್ದು, ಕಲ್ಲಗುಪ್ಪೆ ಶಾಲೆಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.

error: Content is protected !!
Scroll to Top