ಪ್ರಭಾಕರ ಶೆಟ್ಟಿ ಕೊಂಡಳ್ಳಿ ನೌಕರರ ಭವನ ನವೀಕರಣ ಸಮಿತಿಯ ಅಧ್ಯಕ್ಷ

ಕಾರ್ಕಳ ತಾಲೂಕು ಘಟಕದ ಕಟ್ಟಡ ನವೀಕರಣ ಯೋಜನೆಗೆ ಚಾಲನೆ

ಕಾರ್ಕಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನ ನವೀಕರಣ ಸಮಿತಿಯ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕಿನ ಅಧ್ಯಕ್ಷ, ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನ ಕನ್ನಡ ಶಿಕ್ಷಕ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಬಂಡಿಮಠದಲ್ಲಿರುವ ನೌಕರರ ಭವನದ ಕಟ್ಟಡ ನವೀಕರಣ ಹಾಗೂ ಇತರ ಅಭಿವೃದ್ಧಿ ಕಾರ್ಯಕ್ಕೆ ರೂಪುರೇಷೆ ಸಿದ್ಧವಾಗಿದ್ದು, ತಾಲೂಕಿನ ಎಲ್ಲ ನೌಕರರ ವೃಂದ ಸಂಘಗಳು, ನಿವೃತ್ತ ನೌಕರರು, ದಾನಿಗಳು, ನೌಕರರು, ಜನಪ್ರತಿನಿಧಿಗಳು, ಜಿಲ್ಲೆ ಹಾಗೂ ರಾಜ್ಯ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳ ನೆರವಿನೊಂದಿಗೆ ಭವನ ನಿರ್ಮಾಣವಾಗುತ್ತಿದೆ.error: Content is protected !!
Scroll to Top