ಎಸ್‌ಬಿಐನಲ್ಲಿದೆ 6160 ಹುದ್ದೆ

ಸೆ.21 ಅರ್ಜಿ ಸಲ್ಲಿಸಲು ಕೊನೇ ದಿನಾಂಕ

ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಸ್‌ಬಿಐ ಅಪ್ರೆಂಟಿಸ್‌ಷಿಪ್‌ ರಿಕ್ರೂಟ್‌ಮೆಂಟ್‌ 2023ರ ಅಧಿಸೂಚನೆಯನ್ನು ಪ್ರಕಟಿಸಿದೆ. ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು. ಎಸ್‌ಬಿಐನಲ್ಲಿ ಒಟ್ಟು 6160 ಅಪ್ರೆಂಟಿಸ್‌ಷಿಪ್‌ ಹುದ್ದೆಗಳಿವೆ. ಆನ್‌ಲೈನ್‌ನಲ್ಲಿ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆಸಕ್ತರು sbi.co.in ವೆಬ್‌ಸೈಟ್‌ ಮೂಲಕ ಅಪ್ರೆಂಟಿಸ್‌ಷಿಪ್‌ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿರ್ದಿಷ್ಟ ಒಂದು ರಾಜ್ಯದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಅಪ್ರೆಂಟಿಸ್‌ಷಿಪ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಸಂಬಂಧಪಟ್ಟ ಪ್ರಾಜೆಕ್ಟ್‌ಗೆ ಮಾತ್ರ ಕೆಲಸ ಮಾಡುವ ಅವಕಾಶ ಹೊಂದಿರುತ್ತಾರೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಸೆಪ್ಟೆಂಬರ್‌ 1, 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್‌ 21, 2023

ಲಿಖಿತ ಪರೀಕ್ಷೆ ದಿನಾಂಕ: ಅಕ್ಟೋಬರ್‌/ ನವೆಂಬರ್‌ 2023

ಅಂಗೀಕೃತ ವಿಶ್ವವಿದ್ಯಾಲಯದಿಂದ, ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದ ಅಭ್ಯರ್ಥಿಗಳು ಎಸ್‌ಬಿಐ ಅಪ್ರೆಂಟಿಸ್‌ಷಿಪ್‌ ರಿಕ್ರೂಟ್‌ಮೆಂಟ್‌ 2023ಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ 100 ಪ್ರಶ್ನೆಗಳು ಮತ್ತು 100 ಅಂಕಗಳು ಇರುತ್ತವೆ. 60 ನಿಮಿಷದ ಪರೀಕ್ಷೆ ಇದಾಗಿದೆ. ಜನರಲ್‌ ಇಂಗ್ಲಿಷ್‌ ಜತೆಗೆ ಕನ್ನಡ ಇತ್ಯಾದಿ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.









































































error: Content is protected !!
Scroll to Top